ವಿಜಯಸಾಕ್ಷಿ ಸುದ್ದಿ, ಗದಗ : ಎಸ್‌ಎಸ್‌ಕೆ ಸಮಾಜದ ವತಿಯಿಂದ ನಗರದ ಹಳೇ ಸರಾಫ್ ಬಜಾರದಲ್ಲಿರುವ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಭಾಸ್ಕರಸಾ ಪವಾರ ಸಭಾಗೃಹದಲ್ಲಿ ನಡೆಯಲಿರುವ ನಮ್ಮೂರ ದಸರಾ ಉತ್ಸವ-2024 ಕಾರ್ಯಕ್ರಮಕ್ಕೆ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರಿಗೆ ಅಮಂತ್ರಣ ನೀಡಲಾಯಿತು.
ನಾಡಹಬ್ಬ ನಮ್ಮೂರ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 10ರಂದು ಗುರುವಾರ ಬೆಳಿಗ್ಗೆ 7 ಗಂಟೆಗೆ ನಡೆಯಲಿರುವ ದಸರಾ ದರಬಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಕೆ ಸಮಾಜದ ವತಿಯಿಂದ ಹಿಂದಿನಿಂದ ನಡೆದುಕೊಂಡು ಬಂದ ನಮ್ಮೂರ ದಸರಾ ದರಬಾರ ಕುರಿತು ಪಂಚ ಕಮಿಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗದಗ ಎಸ್‌ಎಸ್‌ಕೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ, ಸಮಿತಿ ಚೇರಮನ್ ವಿಷ್ಣುಸಾ ಶಿದ್ಲಿಂಗ, ವೈಸ್ ಚೇರಮನ್ ಸಾಗರ ಪವಾರ, ವಿಶ್ವನಾಥಸಾ ಸೋಳಂಕಿ, ಕಾರ್ಯದರ್ಶಿ ರಾಘವೇಂದ್ರ ಬಾಂಡಗೆ, ಖಜಾಂಚಿ ಸತೀಶ ದವಳೆ ಮುಂತಾದವರು ಉಪಸ್ಥಿತರಿದ್ದರು.