ಪ್ರಾಣ ಪ್ರತಿಷ್ಠೆಗೆ ಶ್ರೀಗಳಿಗೆ ಆಹ್ವಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಳಸಾಪುರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಮಂತ್ರಾಲಯ ಶಾಖಾ ಮಠದ ನೂತನ ಕಟ್ಟಡ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವ ವಿಷಯವನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಯವರ ಗಮನಕ್ಕೆ ತಂದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕಟ್ಟಡ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಿ.ಆರ್. ಪಾಟೀಲ ಹಾಗೂ ಮಂತ್ರಾಲಯ ರಾಘವೇಂದ್ರ ಪಾದಯಾತ್ರೆ ಕಮಿಟಿಯ ಅಧ್ಯಕ್ಷ ರಾಘವೇಂದ್ರ ಕಾಲವಾಡ, ಆರ್ಯವೈಶ್ಯ ಸಮಾಜದ ಗಣ್ಯರು, ಕಳಸಾಪುರ ಹಾಗೂ ಕಿರಟಗೆರೆಯ ಸದಸ್ಯರು ಮಂತ್ರಾಲಯಕ್ಕೆ ತೆರಳಿ ಆಹ್ವಾನ ನೀಡಿದರು.

Advertisement

ಹಿಂದಿನ ಪೀಠಾಧಿಪತಿಗಳಾದ ಶ್ರೀ ಸುಯತೀಂದ್ರ ತೀರ್ಥರು ಭೂಮಿ ಪೂಜೆ ಮಾಡಿ ಶ್ರೀಮಠದ ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. ಮಂತ್ರಾಲಯ ಶ್ರೀಗಳು ಪ್ರಾಣ ಪ್ರತಿಷ್ಠೆಯ ಮೂಲಕ ಎಲ್ಲ ರಾಘವೇಂದ್ರ ಸ್ವಾಮಿ ಭಕ್ತರಿಗೆ ಬೃಂದಾವನಲ್ಲಿ ಅಂತರ್ಗತರಾದ ರಾಘವೇಂದ್ರ ಸ್ವಾಮಿಗಳು ನೀಡಿದ ವಚನದಂತೆ 700 ವರ್ಷಗಳ ಕಾಲ ಭಕ್ತರಿಗೆ ಕಾಮಧೇನು, ಕಲ್ಪವೃಕ್ಷವಾಗಿ ಮನೋಭೀಷ್ಟೆ ಈಡೇರಿಸುತ್ತಿರುವ ಶ್ರೀ ಗುರು ರಾಘವೇಂದ್ರರ ಸ್ವಾಮಿಗಳ ಆಗಮನ ಪ್ರಾಣ ಪ್ರತಿಷ್ಠೆಯ ಮೂಲಕ ಶೀಘ್ರದಲ್ಲಿ ನೆರವೇರಲಿದೆ ಎಂದು ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವದಿಸಿದರು.

ವೇದಿಕೆಯ ಕಾರ್ಯಕ್ರಮದಲ್ಲಿ ಗಣ್ಯಮಾನ್ಯರಿಗೆ ಆಹ್ವಾನ ನೀಡಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಮಂತ್ರೋಕ್ತ ಆಶೀರ್ವಾದ, ಮಂತ್ರಾಕ್ಷತೆ, ಮುದ್ರಾಧಾರಣ, ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಹಲವಾರು ಸಮಿತಿಗಳ ರಚನೆ ಮಾಡಿ ಕಾರ್ಯಕ್ರಮ ಯಶಸ್ವಿ ಮಾಡುತ್ತೇವೆ ಎಂದು ಗೌರವಾಧ್ಯಕ್ಷರಾದ ಡಿ.ಆರ್. ಪಾಟೀಲ ಶ್ರೀಗಳಲ್ಲಿ ಅರಿಕೆ ಮಾಡಿಕೊಂಡರು.


Spread the love

LEAVE A REPLY

Please enter your comment!
Please enter your name here