HomeSports NewsIPL 2025: ಲಕ್ನೋ ತಂಡದ ನಾಯಕ ರಿಷಭ್ ಪಂತ್​ಗೆ ಮತ್ತೊಂದು ಜವಾಬ್ದಾರಿ! ಏನದು?

IPL 2025: ಲಕ್ನೋ ತಂಡದ ನಾಯಕ ರಿಷಭ್ ಪಂತ್​ಗೆ ಮತ್ತೊಂದು ಜವಾಬ್ದಾರಿ! ಏನದು?

For Dai;y Updates Join Our whatsapp Group

Spread the love

IPL 2025ರ ಆರಂಭಕ್ಕೆ ಕೆಲವೇ ತಿಂಗಳು ಬಾಕಿ ಇದೆ. ಎಲ್ಲಾ ತಂಡಗಳು ಟ್ರೋಫಿ ಗೆಲ್ಲಲು ತಯಾರಿ ಮಾಡಿಕೊಳ್ಳುತ್ತಿದೆ. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಹೀಗಿನಿಂದಲೇ ಭರ್ಜರಿ ಸಿದ್ಧತೆ ಕೈಗೊಂಡಿದೆ.

ಹೌದು, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ರಿಷಭ್ ಪಂತ್ ಆಯ್ಕೆಯಾದ ಬೆನ್ನಲ್ಲೇ ಮತ್ತೊಂದು ಬಿಗ್ ಅಪ್​ಡೇಟ್ ಹೊರಬಿದ್ದಿದೆ. ಮಾಹಿತಿ ಪ್ರಕಾರ, ಪಂತ್ ಮುಂಬರುವ ಐಪಿಎಲ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಬಗ್ಗೆ ರಿಷಭ್ ಹಾಗೂ LSG ತಂಡದ ಮೆಂಟರ್ ಝಹೀರ್ ಖಾನ್ ನಡುವೆ ಚರ್ಚೆ ನಡೆದಿದೆ.

ಐಪಿಎಲ್​ ಆರಂಭಕ್ಕೂ ಮುನ್ನವೇ ಇಂತಹದೊಂದು ಚರ್ಚೆ ನಡೆಯಲು ಮುಖ್ಯ ಕಾರಣ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಆರಂಭಿಕರ ಕೊರತೆ. LSG ಫ್ರಾಂಚೈಸಿ ಈ ಬಾರಿ ಆರಂಭಿಕನ ಸ್ಥಾನಕ್ಕೆ ಖರೀದಿಸಿದ್ದು ಸೌತ್ ಆಫ್ರಿಕಾದ ದಾಂಡಿಗ ಐಡೆನ್ ಮಾರ್ಕ್ರಾಮ್ ಅವರನ್ನು. ಆದರೆ ಅವರೊಂದಿಗೆ ಕಣಕ್ಕಿಳಿಯುವ ಮತ್ತೋರ್ವ ಆಟಗಾರ ಯಾರು ಎಂಬುದೇ ಈಗ ಪ್ರಶ್ನೆ ಶುರುವಾಗಿದೆ.

ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಬಲಿಷ್ಠ ದಾಂಡಿಗರ ದಂಡೇ ಇದ್ದು, ಇವರೆಲ್ಲರೂ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳು. ಇಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲು ಡೇವಿಡ್ ಮಿಲ್ಲರ್, ಆಯುಷ್ ಬದೋನಿ, ಶಹಬಾಝ್ ಅಹ್ಮದ್, ಮಿಚೆಲ್ ಮಾರ್ಷ್ ಇದ್ದಾರೆ.

ಹಾಗೆಯೇ ಮೂರನೇ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಹೀಗಾಗಿ ಆರಂಭಿಕನ ಸ್ಥಾನಕ್ಕೆ ಭಾರತೀಯ ಆಟಗಾರನ ಅಗತ್ಯತೆಯಿದೆ. ಹೀಗಾಗಿ ರಿಷಭ್ ಪಂತ್ ಅವರನ್ನೇ ಆರಂಭಿಕನಾಗಿ ಕಣಕ್ಕಿಳಿಸಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಚಿಂತಿಸಿದೆ.

ಒಂದು ವೇಳೆ ರಿಷಭ್ ಪಂತ್ ಆರಂಭಿಕನಾಗಿ ಕಣಕ್ಕಿಳಿದರೆ, ಅವರಿಗೆ ಜೋಡಿಯಾಗಿ ಐಡೆನ್ ಮಾರ್ಕ್ರಾಮ್ ಅಥವಾ ಮಿಚೆಲ್ ಮಾರ್ಷ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಆಕ್ರಮಣಕಾರಿ ದಾಂಡಿಗರನ್ನು ಕಣಕ್ಕಿಳಿಸಿ ಪವರ್​ಪ್ಲೇನಲ್ಲಿ ಪವರ್​ ಪ್ರದರ್ಶಿಸಿಲು LSG ಫ್ರಾಂಚೈಸಿ ಮಾಸ್ಟರ್​ ಪ್ಲ್ಯಾನ್ ರೂಪಿಸುತ್ತಿದೆ ಎನ್ನಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!