ಚೆನ್ನೈನ ಚೆಪಾಕ್ ಮೈದಾನದಲ್ಲಿ ಶುಕ್ರವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ 50 ರನ್ಗಳ ಬೃಹತ್ ಜಯ ಸಾಧಿಸಿದೆ.
ಇನ್ನೂ ಚೆನ್ನೈ ವಿರುದ್ಧ ಗೆದ್ದು ಬೀಗಿದ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಮುಂದಿನ ಎದುರಾಳಿ ಗುಜರಾತ್ ತಂಡವನ್ನು ಮಣಿಸಲು RCB ರೆಡಿಯಾಗಿದೆ. ಹೀಗಾಗಿ ಇಂದು ಸಿಲಿಕಾನ್ ಸಿಟಿ ಬೆಂಗಳೂರಿಗೆ RCB ರಾಯಲ್ ಆಗಿ ಎಂಟ್ರಿ ಕೊಟ್ಟಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿನ ಕಡೆಗೆ ಆರ್ ಸಿ ಬಿ ಪ್ಲೇಯರ್ಸ್ ಮುಖ ಮಾಡಿದ್ದಾರೆ. ಏರ್ಪೋರ್ಟ್ ಗೆ ಪ್ಲೇಯರ್ಸ್ ಬಂದಿಳಿಯುತ್ತಿದಂತೆ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಅಭಿಮಾನಿಗಳ ಕಡೆ ಕೈ ಬೀಸಿ RCB ಪ್ಲೇಯರ್ಸ್ ಚಿಯರ್ಸ್ ಹೇಳಿದ್ದಾರೆ.
ಇನ್ನೂ 17 ವರ್ಷ ಗಳ ನಂತರ ಚೆನ್ನೈನ ಎಂ,ಎ ಚಿದಂಬರಂ ಸ್ಟೇಡಿಯಂ ನಲ್ಲಿ ಚೆನ್ನೈ ಮಣಿಸುವ ಮೂಲಕ RCB ತಂಡ ಇತಿಹಾಸ ಸೃಷ್ಟಿ ಮಾಡಿತ್ತು. ಇನ್ನೂ ಮುಂದಿನ ಪಂದ್ಯವನ್ನು ಏಪ್ರಿಲ್ 2 ರಂದು RCB ತನ್ನ ತವರು ಬೆಂಗಳೂರಿನಲ್ಲಿ ಗುಜರಾತ್ ವಿರುದ್ಧ ಸೆಣಸಾಡಲಿದೆ.



