HomeSports NewsIPL 2025: ಟೀಂ ಇಂಡಿಯಾಗೆ ಬಿಗ್ ಲಾಸ್ ಮಾಡಿದ್ರಾ ವಿರಾಟ್!? ಆ ದುಡುಕು ನಿರ್ಧಾರ ಬೇಡವಾಗಿತ್ತು!

IPL 2025: ಟೀಂ ಇಂಡಿಯಾಗೆ ಬಿಗ್ ಲಾಸ್ ಮಾಡಿದ್ರಾ ವಿರಾಟ್!? ಆ ದುಡುಕು ನಿರ್ಧಾರ ಬೇಡವಾಗಿತ್ತು!

For Dai;y Updates Join Our whatsapp Group

Spread the love

ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ. ಇವರ ಫಿಟ್ನೆಸ್, ಬ್ಯಾಟಿಂಗ್ ಶೈಲಿ, ಫೀಲ್ಡಿಂಗ್ ನಲ್ಲಿ ಇವರು ತೋರಿಸೋ ಎನರ್ಜಿ.. ಎದುರಾಳಿಗಳನ್ನು ನಡುಗಿಸೋ ಇವರ ಆಟ..ಅಬ್ಬಬ್ಬಾ ನಿಜಕ್ಕೂ ರೋಮಾಂಚಕ.

ಕಿಂಗ್ ಕೊಹ್ಲಿ ಎಂದೇ ಕ್ರಿಕೆಟ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ವಿರಾಟ್ ಮಾಡಿದ್ದೆಲ್ಲಾ ದಾಖಲೆಗಳೆ. ಇವರಿಗೆ ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಕಿಂಗ್ ವಿರಾಟ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಚೇಸಿಂಗ್ ಮಾಸ್ಟರ್, ದಾಖಲೆಗಳ ಸರದಾರ ಎಂಬೆಲ್ಲಾ ಬಿರುದು ಪಡೆದಿರುವ ವಿರಾಟ್ ಕೊಹ್ಲಿ ಅವರು ಟೀಮ್ ಇಂಡಿಯಾಗೆ ದೊಡ್ಡ ಲಾಸ್ ಒಂದನ್ನು ಮಾಡಿದ್ದಾರೆ. ಅದೇನು ಅಂತ ಹೇಳ್ತೀವಿ ಈ ಸುದ್ದಿ ಪೂರ್ತಿ ಓದಿ.

ಟೀಮ್ ಇಂಡಿಯಾಗೆ ಆಘಾತ ಕೊಟ್ಟಿದ್ದ ಕೊಹ್ಲಿ:-

ಅದು ಟಿ20 ವಿಶ್ವಕಪ್ ಫೈನಲ್​ ಮ್ಯಾಚ್. ಸೌತ್ ಆಫ್ರಿಕಾ ಎದುರಿನ ಪಂದ್ಯ.. ಈ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾ ಟಿ20 ವಿಶ್ವ ಚಾಂಪಿಯನ್ ಆಗಿ ಮೆರೆದಾಡಿತ್ತು. ಗೆದ್ದ ಖುಷಿಯಲ್ಲಿ ತೇಲಾಡುತ್ತಿದ್ದ ಫ್ಯಾನ್ಸ್​​​​​ಗೆ ಒಂದು ಬರ ಸಿಡಲ ಆಘಾತ ಎದುರಾಗಿತ್ತು. ಅದೇ ಆ ಪಂದ್ಯದ ಮ್ಯಾಚ್ ವಿನ್ನರ್ ವಿರಾಟ್ ಕೊಹ್ಲಿಯ ನಿವೃತ್ತಿ. ಮ್ಯಾಚ್ ಗೆಲ್ಲಿಸಿದ್ದ ಕಿಂಗ್​ ಕೊಹ್ಲಿ, ಪಂದ್ಯದ ಬಳಿಕ ಸೈಲೆಂಟ್​ ಆಗಿಯೇ ನಿವೃತ್ತಿಯ ಶಾಕ್ ನೀಡಿದ್ದರು. ವಯಸ್ಸಾಯ್ತು. ಟಿ20 ಕ್ರಿಕೆಟ್​ನಿಂದ ದೂರವಾಗಲು ಇದೇ ಸಮಯ ಅನ್ನೋ ನೆಮ್ಮದಿಯೂ ಒಂದೆಡೆ ಇತ್ತು. ಆದ್ರೀಗ ವಿರಾಟ್​​​​​​, ಟಿ20ಗೆ ಗುಡ್ ಬೈ ಹೇಳಿ ತಪ್ಪು ಮಾಡಿದ್ರಾ ಎಂಬ ಪ್ರಶ್ನೆ ಕಾಡ್ತಿದೆ. ಇದಕ್ಕೆ ಕಾರಣ ಕಿಂಗ್ ಕೊಹ್ಲಿಯ ಆಟ.

ಎಸ್, ಐಪಿಎಲ್​​ ಸೀಸನ್​ 18ರ ಸೀಸನ್ ಕಿಂಗ್​ ಕೊಹ್ಲಿಗೆ ಸಮರ್ಪಣೆ ಅನ್ನೋ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿ ಬಂದಿದೆ. ಅಭಿಮಾನಿಗಳ ವಲಯದ ಈ ನಿರೀಕ್ಷೆಯನ್ನ ವಿರಾಟ್​ ಹುಸಿಗೊಳಿಸಿಲ್ಲ. ​ ಐಪಿಎಲ್​ ಅಖಾಡದಲ್ಲಿ ಕ್ಲಾಸ್​ ಆಟದಿಂದಲೇ ಧೂಳೆಬ್ಬಿಸ್ತಿರುವ ಕೊಹ್ಲಿ, ಎದುರಾಳಿಗಳ ಪಾಲಿಗೆ ಅಕ್ಷರಶಃ ಸಿಂಹ ಸ್ವಪ್ನವಾಗಿದ್ದಾರೆ.

ಕೊಹ್ಲಿ ಅಂದ್ರೆ.. ಕನ್ಸಿಸ್ಟೆನ್ಸಿ.. ಕನ್ಸಿಸ್ಟೆನ್ಸಿ ಅಂದ್ರೆ, ವಿರಾಟ್ ಕೊಹ್ಲಿ ಅನ್ನೋ ಮಾತಿದೆ. ಈ ಮಾತು ಈ ಸೀಸನ್​ನಲ್ಲಿ ಅಕ್ಷರಶಃ ನಿಜ ಮಾಡಿದ್ದಾರೆ. ಯಾಕಂದ್ರೆ, ಆಡಿದ 11 ಮ್ಯಾಚ್​ಗಳ ಪೈಕಿ 4 ಮ್ಯಾಚ್​ಗಳಲ್ಲಿ ಬಿಟ್ರೆ, ಉಳಿದ 7 ಮ್ಯಾಚ್​ಗಳಲ್ಲಿ ಅರ್ಧಶತಕದ ಗಡಿದಾಟಿದ್ದಾರೆ. ಇದು ಪ್ರಸಕ್ತ ಆವೃತ್ತಿಯಲ್ಲಿ ಆಟಗಾರನೊಬ್ಬ ಸಿಡಿಸಿದ ಗರಿಷ್ಠಅರ್ಧಶತಕಗಳಾಗಿವೆ. ಇದು ವಿರಾಟ್ ಕನ್ಸಿಸ್ಟೆನ್ಸಿ ಆಟಕ್ಕಿಡಿದ ಕೈಗನ್ನಡಿಯೇ ಆಗಿದೆ. ಇಂಟ್ರೆಸ್ಟಿಂಗ್​​​​​​​​​​ ಅಂದ್ರೆ, ಕೊಹ್ಲಿ ಅರ್ಧಶತಕ ಸಿಡಿಸಿದ ಪ್ರತಿ ಮ್ಯಾಚ್​ನಲ್ಲಿ ಆರ್​ಸಿಬಿ ಗೆಲ್ಲುತ್ತಿದೆ. ಇದು ಕೊಹ್ಲಿಯ ಆಟದ ಇಂಪ್ಯಾಕ್ಟ್​ ಎಷ್ಟು ಅನ್ನೋದನ್ನೇ ಸಾರಿ ಸಾರಿ ಹೇಳ್ತಿದೆ.

ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರೂ ಚುಟುಕು ಫಾರ್ಮೆಟ್​ನಲ್ಲಿ ಕೊಹ್ಲಿಯ ಖದರ್​ ಕಡಿಮೆಯಾಗಿಲ್ಲ. ಈ ಸೀಸನ್​ನಲ್ಲಿ ಕೊಹ್ಲಿ ಆಟ ನೋಡಿದವರಲ್ಲಿ ಟಿ20ಗೆ ತುಂಬಾ ಬೇಗ ಗುಡ್​ ಬೈ ಹೇಳಿ ಬಿಟ್ರಾ ಅನ್ನೋ ಪ್ರಶ್ನೆ ಹುಟ್ಟದೆ ಇರಲ್ಲ. ಪ್ಲೇಯಿಂಗ್​ ಕಂಡಿಷನ್ಸ್​ನ ಅರ್ಥ ಮಾಡಿಕೊಂಡು ಮ್ಯಾಚ್​​ ಸಿಚ್ಯುವೇಶನ್​ಗೆ ತಕ್ಕಂತೆ ಕೊಹ್ಲಿ ಅಷ್ಟು ಬೊಂಬಾಟ್​ ಬ್ಯಾಟಿಂಗ್​ ನಡೆಸ್ತಿದ್ದಾರೆ. ಸೀಸನ್​ನಲ್ಲಿ 11 ಇನ್ನಿಂಗ್ಸ್​ಗಳನ್ನಾಡಿರೋ ವಿರಾಟ್​ ಬರೋಬ್ಬರಿ 63.13ರ ಸರಾಸರಿಯಲ್ಲಿ 505 ರನ್​ ಕೊಳ್ಳೆ ಹೊಡೆದಿದ್ದಾರೆ. 7 ಬಾರಿ ಆಫ್​​ ಸೆಂಚುರಿಯ ಗಡಿ ದಾಟಿದ್ದಾರೆ. ಅಷ್ಟೇ ಅಲ್ಲ.! ಆರ್​ಸಿಬಿಯ ರಿಯಲ್ ಮ್ಯಾಚ್ ವಿನ್ನರ್ ಆಗಿ ಮೆರೆದಾಡ್ತಿದ್ದಾರೆ.

ಟಿ20 ಅಖಾಡದಲ್ಲಿ ಅಬ್ಬರಿಸ್ತಿರುವ ವಿರಾಟ್, ನಿಜಕ್ಕೂ 2026ರ ಟಿ20 ವಿಶ್ವಕಪ್​ನಲ್ಲಿ ಆಡಿದ್ರೆ ಉತ್ತಮ ಎಂಬ ಮಾತುಗಳು ಕೇಳಿ ಬರುತ್ತಿದೆ. ಯಾಕಂದ್ರೆ, 2026ರ ಟಿ20 ವಿಶ್ವಕಪ್​ ಭಾರತ ಹಾಗೂ ಲಂಕಾ ಅತಿಥ್ಯದಲ್ಲಿ ನಡೆಯಲಿದೆ. ಭಾರತ ಹಾಗೂ ಲಂಕಾದ ಯಾವುದೇ ಕಂಡೀಷನ್ಸ್​ನಲ್ಲಾದರು ಸರಾಗವಾಗಿ ರನ್ ಗಳಿಸಬಲ್ಲ ಕೊಹ್ಲಿ, 36ರ ವಯಸ್ಸಿನಲ್ಲೂ ಅದೇ ಫಿಟ್ನೆಸ್ ಹೊಂದಿದ್ದಾರೆ. ಟಿ20ಗೆ ಬೇಕಾದ ರಿದಮ್ ಇದೆ. ಇದೆಲ್ಲಾ ಇರುವ ಕೊಹ್ಲಿ, ಮುಂದಿನ ಟಿ20 ತನಕ ವೇಯ್ಟ್​ ಮಾಡಿದ್ರೆ ಟೀಮ್ ಇಂಡಿಯಾಗೆ ಲಾಭವಾಗ್ತಿತ್ತು ಅನ್ನೋದು ಎಲ್ಲರ ಅಭಿಪ್ರಾಯವಾಗಿದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!