IPL 2025: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ..!

0
Spread the love

ಬೆಂಗಳೂರು: ಇಂದು ಬೆಂಗಳೂರಿನಲ್ಲಿಈ ಸೀಸನ್‌ನ ಮೊದಲ ಐಪಿಎಲ್  (IPL) ಪಂದ್ಯ ನಡೆಯಲಿದೆ. ಈ ಹಿನ್ನೆಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೇವೆ ಒದಗಿಸುವುದಾಗಿ ಘೋಷಣೆ ಮಾಡಿದೆ. ಕೇವಲ ಇಂದಿನ ಪಂದ್ಯಕ್ಕೆ ಮಾತ್ರವಲ್ಲದೆ, ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಐಪಿಎಲ್ ಪಂದ್ಯಗಳ ದಿನ ಕೂಡ ಬಿಎಂಟಿಸಿ ವಿಶೇಷ ಬಸ್ಸುಗಳು ಕಾರ್ಯಚರಣೆ ನಡೆಸಲಿವೆ.

Advertisement

ಐಪಿಎಲ್​ಗೆ ಬಿಎಂಟಿಸಿ ವಿಶೇಷ ಬಸ್: ಎಲ್ಲಿಂದ ಎಲ್ಲಿಗೆ ಸ್ಪೆಷಲ್ ಬಸ್?

  • ಎಂ ಚಿನ್ನಸ್ವಾಮಿ ಕ್ರೀಡಾಂಗಣ – ಕಾಡುಗೋಡಿಬಸ್‌ ನಿಲ್ದಾಣ (ಹೆಚ್.ಎ.ಎಲ್‌ರಸ್ತೆ)
  • ಚಿನ್ನಸ್ವಾಮಿ ಕ್ರೀಡಾಂಗಣ (ಜಿ-2) – ಸರ್ಜಾಪುರ
  • ಚಿನ್ನಸ್ವಾಮಿ ಕ್ರೀಡಾಂಗಣ (ಜಿ-3) – ಎಲೆಕ್ಟ್ರಾನಿಕ್‌ ಸಿಟಿ (ಹೊಸೂರುರಸ್ತೆ)
  • ಚಿನ್ನಸ್ವಾಮಿ ಕ್ರೀಡಾಂಗಣ (ಜಿ-4) – ಬನ್ನೇರುಘಟ್ಟ ಮೃಗಾಲಯ.
  • ಚಿನ್ನಸ್ವಾಮಿ ಕ್ರೀಡಾಂಗಣ (ಜಿ-7) – ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ)
  • ಚಿನ್ನಸ್ವಾಮಿ ಕ್ರೀಡಾಂಗಣ (ಜಿ-10) – ಆರ್.ಕೆ. ಹೆಗಡೆ ನಗರ ಯಲಹಂಕ (ನಾಗವಾರ, ಟ್ಯಾನರಿ ರಸ್ತೆ)
  • ಚಿನ್ನಸ್ವಾಮಿ ಕ್ರೀಡಾಂಗಣ (317 ಜಿ) – ಹೊಸಕೋಟೆ.
  • ಚಿನ್ನಸ್ವಾಮಿ ಕ್ರೀಡಾಂಗಣ (13) – ಬನಶಂಕರಿ.

ಈಗಾಗಲೇ ನಮ್ಮ ಮೆಟ್ರೋ ಕಾರ್ಯಾಚರಣೆ ಸಮಯವನ್ನು ರಾತ್ರಿ 12:30 ರವರೆಗೆ ವಿಸ್ತರಣೆ ಮಾಡಿದೆ. ಇದೀಗ ಬಿಎಂಟಿಸಿ ಕೂಡ ಟಿಕೆಟ್ ಪ್ರಿಯರಿಗೆ ಶುಭ ಸುದ್ದಿ ನೀಡಿದೆ.


Spread the love

LEAVE A REPLY

Please enter your comment!
Please enter your name here