2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿದೆ. ಇದು RCB ಅಭಿಮಾನಿಗಳ ಖುಷಿಯನ್ನು ಡಬಲ್ ಮಾಡಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಆರ್‌ಸಿಬಿ, ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಪಂಜಾಬ್ ತಂಡವು ತನ್ನ ತವರು ನೆಲದಲ್ಲಿ ಆರ್‌ಸಿಬಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಸದ್ಯ ಬೆಂಗಳೂರು ಫಿನಾಲೆಗೆ ತಲುಪಿದ್ದರೂ ಈವರೆಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. 2016 ರಕ್ಕೂ ಮೊದಲು, ತಂಡವು 2011 ಮತ್ತು 2009 ರಲ್ಲಿ ಫೈನಲ್ ತಲುಪಿತ್ತು ಆದರೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ವಿಶೇಷ ಎಂದರೆ ತಂಡವು ಫೈನಲ್‌ನಲ್ಲಿ ಎಂದಿಗೂ ಸೋತಿಲ್ಲದ ಆಟಗಾರನನ್ನು ಹೊಂದಿದೆ.
ಆರ್‌ಸಿಬಿ ತಂಡದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಇದ್ದಾರೆ. ಹ್ಯಾಜಲ್‌ವುಡ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಯಾವುದೇ ಫೈನಲ್ ಪಂದ್ಯವನ್ನು ಸೋತಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ 6 ಫೈನಲ್ ಪಂದ್ಯಗಳನ್ನು ಆಡಿದ್ದಾರೆ. ಅವರು ಇದ್ದ ತಂಡ ಇವೆಲ್ಲವುಗಳಲ್ಲಿ ಗೆದ್ದಿದೆ. 2021 ರಲ್ಲಿ, ಹ್ಯಾಜಲ್‌ವುಡ್ ಸಿಡ್ನಿ ಸಿಕ್ಸರ್ಸ್ ಪರ ಚಾಂಪಿಯನ್ಸ್ ಲೀಗ್ ಟಿ20 ಫೈನಲ್‌ನಲ್ಲಿ ಆಡಿದ್ದರು. ಅವರ ತಂಡ ಗೆದ್ದಿತ್ತು. 2015 ರ ವಿಶ್ವಕಪ್ ಫೈನಲ್‌ನಲ್ಲಿ ಅವರು ತಂಡದ ಭಾಗವಾಗಿದ್ದರು. 2020 ರ ಬಿಗ್ ಬ್ಯಾಷ್ ಲೀಗ್, 2021 ರ ಐಪಿಎಲ್ ಮತ್ತು 2021 ರ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಜೋಶ್ ಹ್ಯಾಜಲ್‌ವುಡ್ ಕೂಡ ಇದ್ದರು. ಇದಲ್ಲದೆ, ಆಸ್ಟ್ರೇಲಿಯಾ 2023 ರ ವಿಶ್ವಕಪ್ ಗೆದ್ದಿತು. ಆ ಪಂದ್ಯದಲ್ಲಿ ಕೂಡ ಹ್ಯಾಜಲ್‌ವುಡ್ ಆಡಿದ್ದರು.
ಹೀಗಾಗಿ ಜೋಶ್ ಹ್ಯಾಜಲ್ ವುಡ್ ಅವರಿಂದ ಫೈನಲ್ ನಲ್ಲಿ RCB ಗೆಲ್ಲುವ ಮುನ್ಸೂಚನೆ ಸಿಕ್ಕಿದೆ.