IPL 2025ಕ್ಕೆ ಸಿಕ್ತು ಗ್ರ್ಯಾಂಡ್ ವೆಲ್ಕಮ್: ಶಾರುಖ್ ಮಾತಿನ ಮೋಡಿಗೆ, ಮತ್ತೇರಿಸಿದ ಶ್ರೇಯಾ ಹಾಡು!

0
Spread the love

ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ IPL 2025ಕ್ಕೆ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ.

Advertisement

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅದ್ಭುತ ಭಾಷಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಗಾಯಕಿ ಶ್ರೇಯಾ ಘೋಷಾಲ್‌ ತನ್ನ ಮಧುರ ಕಂಠದಿಂದ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟರು. ಶ್ರೇಯಾ ಅವರ ಮೆಲೋಡಿ ಗಾಯನಕ್ಕೆ ಫ್ಯಾನ್ಸ್‌ ಫಿದಾ ಆದರು.

ಶ್ರೇಯಾ ಘೋಷಾಲ್ ಅವರ ಪ್ರದರ್ಶನದ ನಂತರ ಬಾಲಿವುಡ್ ನಟಿ ದಿಶಾ ಪಟಾನಿ ಮನಮೋಹಕ ನೃತ್ಯದ ಮೂಲಕ ಗಮನ ಸೆಳೆದರು. ಬೆಳ್ಳಿ ಉಡುಪಿನಲ್ಲಿ ಕಂಗೊಳಿಸಿದ ದಿಶಾ ತಮ್ಮ ಹಾಟ್‌ ನೃತ್ಯದ ಮೂಲಕ ವೇದಿಕೆಯನ್ನು ರಂಗೇರಿಸಿದರು.

ಹೀಗೆ ಉದ್ಘಾಟನೆ ಅಚ್ಚುಕಟ್ಟಾಗಿ ನೆರವೇರಿದೆ. ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯ ಶುರುವಾಗಿದೆ. ಮೊದಲಿಗೆ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಕೋಲ್ಕತ್ತಾ ತಂಡವು ಮೊದಲಿಗೆ ಬ್ಯಾಟಿಂಗ್ ಮಾಡುತ್ತಿದೆ.


Spread the love

LEAVE A REPLY

Please enter your comment!
Please enter your name here