HomeSports NewsIPL 2025: ಗುಜರಾತ್ ಹ್ಯಾಟ್ರಿಕ್ ಗೆಲುವಿಗೆ ಬಿತ್ತು ಬ್ರೇಕ್: GT ವಿರುದ್ಧ ಲಕ್ನೋಗೆ ರೋಚಕ ಜಯ!

IPL 2025: ಗುಜರಾತ್ ಹ್ಯಾಟ್ರಿಕ್ ಗೆಲುವಿಗೆ ಬಿತ್ತು ಬ್ರೇಕ್: GT ವಿರುದ್ಧ ಲಕ್ನೋಗೆ ರೋಚಕ ಜಯ!

For Dai;y Updates Join Our whatsapp Group

Spread the love

ಲಕ್ನೋದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಐಪಿಎಲ್​ನ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಲಕ್ನೋ ಕ್ಯಾಪ್ಟನ್​ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಎದುರಾಳಿ ಗುಜರಾತ್​ ತಂಡದವರನ್ನು ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ ಗುಜರಾತ್ ಪರ ನಾಯಕ ಶುಭ್​ಮನ್​ ಗಿಲ್​ ಹಾಗೂ ಸಾಯಿ ಸುದರ್ಶನ್​ ಅತ್ಯದ್ಭುತ ಇನ್ನಿಂಗ್ಸ್​ ಕಟ್ಟಿದರು.

ಇದರಿಂದ ತಂಡದ ಮೊತ್ತ 120 ಆಗಿದ್ದಾಗ ಗಿಲ್​ ಹಾಫ್​​ ಸೆಂಚುರಿ ಸಿಡಿಸಿದ ಬಳಿಕ ಪೂರನ್​ಗೆ ಕ್ಯಾಚ್ ಕೊಟ್ಟರು. ನಾಯಕನ ಬೆನ್ನಲ್ಲೇ ಸುದರ್ಶನ್​ ಕೂಡ 60 ರನ್​ ಗಳಿಸಿ ಆಡುವಾಗ ಆವೇಶ್​ಖಾನ್​ ಬೌಲಿಂಗ್​ನಲ್ಲಿ ಔಟ್​ ಆಗಿ ನಡೆದರು. ಜೋಶ್​ ಬಟ್ಲರ್​ 16, ಸುಂದರ್ 2 ಬೇಗನೇ ಕ್ರೀಸ್​ ಖಾಲಿ ಮಾಡಿದರು. ಶೆರ್ಫೇನ್ ರುದರ್ಫೋರ್ಡ್ 22 ಹಾಗೂ ಶಾರುಖ್​ ಖಾನ್ ಅವರ 11 ರನ್​ಗಳಿಂದ ಗುಜರಾತ್ ತಂಡ 181 ರನ್​ಗಳ ಗುರಿಯನ್ನ ಲಕ್ನೋಗೆ ನೀಡಿತ್ತು.

ತವರಲ್ಲಿ ಈ ಟಾರ್ಗೆಟ್​ ಚೇಸ್ ಮಾಡಲು ಶುರು ಮಾಡಿದ ಲಕ್ನೋ ಆರಂಭದಲ್ಲೇ ಬಲಿಷ್ಠ ಬ್ಯಾಟಿಂಗ್ ಮಾಡಿತು. ತಂಡದ ಮೊತ್ತ 65 ಆಗಿದ್ದಾಗ ಕ್ಯಾಪ್ಟನ್​ ಪಂತ್, ಸುಂದರ್​ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಮಿಚೆಲ್​ ಮಾರ್ಷ್​ ಅನುಪಸ್ಥಿತಿಯಲ್ಲಿ ಪಂತ್ ಆರಂಭಿಕರಾಗಿ ಕಣಕ್ಕೆ ಇಳಿದು ಬ್ಯಾಟಿಂಗ್​ನಲ್ಲಿ ಕೊಂಚ ಸುಧಾರಣೆ ಕಂಡರು. ಪಂತ್ ಬಳಿಕ ಕ್ರೀಸ್​ಗೆ ನಿಕೋಲಸ್​ ಪೂರನ್​ ಆಗಮಿಸಿದರು.

ಆದರೆ ಪಂತ್ ಜೊತೆ ಓಪನರ್​ ಆಗಿ ಬಂದಿದ್ದ ಮಾರ್ಕ್ರಾಮ್ ಅಬ್ಬರದ ಬ್ಯಾಟಿಂಗ್​ ಮುಂದುವರೆಸಿದ್ದರು. ಹೀಗಾಗಿಯೇ 31 ಎಸೆತದಲ್ಲಿ ಮಾರ್ಕ್ರಾಮ್ 9 ಬೌಂಡರಿ, 1 ಸಿಕ್ಸರ್​ನಿಂದ ಭರ್ಜರಿ ಅರ್ಧಶತಕ ಸಿಡಿಸಿ ಬ್ಯಾಟ್​ ಮೇಲೆತ್ತಿದರು. 58 ರನ್​ಗಳಿಸಿ ಆಡುವಾಗ ಗಿಲ್​ಗೆ ಕ್ಯಾಚ್ ಕೊಟ್ಟು ನಡೆದರು. ಒಬ್ಬರು ಹೋದರು ಎನ್ನುವಷ್ಟರಲ್ಲಿ ಹೊಡಿಬಡಿ ಬ್ಯಾಟಿಂಗ್ ಅನ್ನು ಪೂರನ್ ಆಗಲೇ ಆರಂಭಿಸಿದ್ದರು

ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡುತ್ತಿರುವ ನಿಕೋಲಸ್ ಪೂರನ್ ಕೇವಲ 24 ಎಸೆತಗಳಲ್ಲಿ 1 ಫೋರ್ 6 ಸಿಕ್ಸರ್ ಸಮೇತ ಅದ್ಭುತವಾದ ಅರ್ಧಶತಕ ಸಿಡಿಸಿದರು. ಈ ಟೂರ್ನಿಯಲ್ಲಿ ಇದು ಪೂರನ್ ಅವರ 4ನೇ ಅರ್ಧಶತಕವಾಗಿದೆ. 61 ರನ್​ ಗಳಿಸಿರುವಾಗ ರಶೀದ್​ ಖಾನ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿ ಬೇಸರದಲ್ಲೇ ಹೆಜ್ಜೆ ಹಾಕಿದರು. ಬಳಿಕ ಬ್ಯಾಟಿಂಗ್​ಗೆ ಬಂದ ಆಯುಷ್​ ಬದೋನಿ ತಂಡ ಗೆಲ್ಲುವವರೆಗೆ ತಾಳ್ಮೆಯ ಆಟ ಆಡಿದರು. ಆಯುಷ್​ ಬದೋನಿ 20 ಎಸೆತಕ್ಕೆ 28 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 19.3 ಓವರ್​ನಲ್ಲಿ ಲಕ್ನೋ ತಂಡ 4 ವಿಕೆಟ್​ಗೆ 186 ರನ್​ ಗಳಿಸುವ ಮೂಲಕ ವಿಜಯ ಸಾಧಿಸಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!