ರಾಜಸ್ಥಾನ್ ವಿರುದ್ಧ IPL ಪಂದ್ಯದಲ್ಲಿ ಕೋಲ್ಕತ್ತಾಗೆ 8 ವಿಕೆಟ್ ಗಳ ಜಯ ಸಿಕ್ಕಿದೆ. ಈ ಮೂಲಕ ಕೆಕೆಆರ್ ಐಪಿಎಲ್ 2025 ರಲ್ಲಿ ಮೊದಲ ಗೆಲುವು ದಾಖಲಿಸಿದ್ದು, ಇನ್ನೂ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಇಶಾನ್ ಕಿಶನ್, ಸನ್ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಸೆಂಚುರಿ ಬಾರಿಸಿದ್ದು ಖುಷಿ ನೀಡಿದೆ. ಇದೇ ಪ್ರದರ್ಶನವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದಿದ್ದಾರೆ.
ಇದೇ ವೇಳೆ ಮುಂದಿನ ಪಂದ್ಯಗಳಲ್ಲಿ ನಿಮ್ಮಿಂದ ದ್ವಿಶತಕವನ್ನು ನಿರೀಕ್ಷಿಸಬಹುದಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಇಶಾನ್ ಕಿಶನ್, ಅಂತಹದೊಂದು ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಾನು ಡಬಲ್ ಸೆಂಚುರಿ ಬಾರಿಸ್ತೀನಿ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡುವ ಬಯಕೆಯನ್ನು ಹೊಂದಿದ್ದೀನಿ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಏಕದಿನ ಪಂದ್ಯಗಳಲ್ಲಿ 250 ಮತ್ತು 300 ರನ್ ಗಳಿಸುವ ಬಯಕೆಯನ್ನು ಹೊಂದಿರುವುದಾಗಿ ಇಶಾನ್ ಕಿಶನ್ ತಿಳಿಸಿದ್ದಾರೆ. ಈ ಮೂಲಕ ತನ್ನ ಟಾರ್ಗೆಟ್ ಬಿಗ್ ಸ್ಕೋರ್ ಗಳಿಸುವುದು ಎಂಬುದನ್ನು ಯುವ ಎಡಗೈ ದಾಂಡಿಗ ಬಹಿರಂಗಪಡಿಸಿದ್ದಾರೆ.