IPL 2025: ಐಪಿಎಲ್ ಟೂರ್ನಿಯಿಂದಲೇ ಮ್ಯಾಕ್ಸ್ ವೆಲ್ ಔಟ್.. ಯಾಕೆ ಅಂತದ್ದೇನಾಯ್ತು?

0
Spread the love

2025ರ ಐಪಿಎಲ್ ನಿಂದಲೇ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಹಾಗೂ ಪಂಜಾಬ್ ತಂಡದ ಭಾಗವಾಗಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಔಟ್ ಆಗಿದ್ದಾರೆ. ಐಪಿಎಲ್ 2025ರಲ್ಲಿ ಭಾರೀ ನಿರೀಕ್ಷೆಗಳೊಂದಿಗೆ ಕಣಕ್ಕಿಳಿದ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದಿಂದಾಗಿ ಋತುವಿನಿಂದ ಹೊರಗುಳಿದಿದ್ದಾರೆ.

Advertisement

ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಅವರು ಸದ್ಯ ಕೈಬೆರಳಿನ ಮೂಳೆ ಮುರಿತದಿಂದ ಬಳಲುತ್ತಿದ್ದಾರೆ. ಇದರಿಂದ ಪಂದ್ಯದಲ್ಲಿ ಬೌಲಿಂಗ್​ ಹಾಗೂ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಈಗಾಗಲೇ ಐಪಿಎಲ್​ ಪ್ಲೇ ಆಫ್​ ಹಂತಕ್ಕೆ ತಲುಪಿದ್ದು ರೋಚಕತೆ ಪಡೆದಿದ್ದರಿಂದ ಮ್ಯಾಕ್ಸ್​ವೆಲ್​​ ಬದಲಿಗೆ ಪಂಜಾಬ್​ ಕಿಂಗ್ಸ್​ ಬದಲಿ ಆಟಗಾರನಿಗೆ ಮಣೆ ಹಾಕಿದ್ದು 3 ಕೋಟಿ ರೂಪಾಯಿಗಳನ್ನು ನೀಡಿ ತಂಡಕ್ಕೆ ಕರೆ ತರುತ್ತಿದೆ.

2025ರ ಉಳಿದ ಪಂದ್ಯಗಳಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಹೊರಗುಳಿಯುತ್ತಿದ್ದರಿಂದ ಅವರ ಬದಲಿಗೆ ಆಸ್ಟ್ರೇಲಿಯಾದ ಮಿಚೆಲ್ ಓವನ್, ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳಲ್ಲಿದ್ದಾರೆ. ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್‌ ನಲ್ಲಿ ಬಾಬರ್ ಅಜಮ್​ ನೇತೃತ್ವದ ಪೇಶಾವರ್ ಝಲ್ಮಿ ತಂಡದಲ್ಲಿ ಆಡುತ್ತಿರುವ ಬ್ಯಾಟರ್​ ಮಿಚೆಲ್ ಓವನ್ ಅವರನ್ನು 3 ಕೋಟಿ ಹಣ ನೀಡಿ ಪಂಜಾಬ್ ಫ್ರಾಂಚೈಸಿ ತಂಡಕ್ಕೆ ಕರೆತರುತ್ತಿದೆ.

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್​ ಅವರನ್ನು ಈ ಸಲ 4.2 ಕೋಟಿ ರೂಪಾಯಿಗಳಿಗೆ ಪಂಜಾಬ್ ಕಿಂಗ್ಸ್​ ಖರೀದಿ ಮಾಡಿತ್ತು. ಮೇಲೆ ಮೇಲೆ ಪಂದ್ಯದಲ್ಲಿ ಅವಕಾಶಗಳನ್ನು ನೀಡಿದರೂ ಮ್ಯಾಕ್ಸ್​​ವೆಲ್​ನಿಂದ ಯಾವುದೇ ಉತ್ತಮ ಮಟ್ಟದ ಪರ್ಫಾಮೆನ್ಸ್​ ಮೂಡಿ ಬಂದಿರಲಿಲ್ಲ. ಹೀಗಾಗಿ ಅಭಿಮಾನಿಗಳಿಂದ ಅಪಸ್ವರ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಕೈಬೆರಳು ಮುರಿದಿದ್ದರಿಂದ ಅವರನ್ನು ಮುಂದಿನ ಐಪಿಎಲ್​ ಪಂದ್ಯಗಳಿಂದ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here