IPL 2025: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ RCBಗೆ ಭರ್ಜರಿ ಗೆಲುವು: ಕ್ಯಾಪ್ಟನ್ ರಜತ್ ಪಾಟೀದರ್ ಹೇಳಿದ್ದೇನು..?

0
Spread the love

ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕಾರಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡವು 162 ರನ್ ಗಳಿಸಿದರೆ, ಆರ್‌ಸಿಬಿ ತಂಡವು 9 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

Advertisement

ಈ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಪ್ರದರ್ಶನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಬೌಲರ್‌ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ನಾನು ಮೊದಲೇ ಹೇಳಿದಂತೆ, ನಾವು ಮೈದಾನಗಳನ್ನು ನೋಡುವುದಿಲ್ಲ. ಬದಲಾಗಿ ಉತ್ತಮ ಕ್ರಿಕೆಟ್ ಆಡಲು ಬಯಸುತ್ತಿದ್ದೇವೆ.

ಚೇಸಿಂಗ್ ವಿಕೆಟ್, ಬೌಲಿಂಗ್ ಮತ್ತು ಸ್ಕೋರ್ ಬಗ್ಗೆ ಸಾಕಷ್ಟು ಸ್ಪಷ್ಟತೆ ಸಿಗುತ್ತದೆ. ಅದಕ್ಕೆ ಅನುಗುಣವಾಗಿ ನಾವು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಅದರಂತೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೂಡ ಗೆಲುವು ಸಾಧಿಸಿದ್ದೇವೆ ಎಂದರು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೀಡಿದ ಗುರಿ ನೋಡಿದಾಗಲೇ, ಇದನ್ನು ಚೇಸ್ ಮಾಡಬಹುದೆಂದು ತಿಳಿದಿತ್ತು. ಏಕೆಂದರೆ ನನ್ನ ಬೌಲರ್​ಗಳು ಎದುರಾಳಿ ಬ್ಯಾಟರ್​ಗಳನ್ನು ಕಡಿಮೆ ಸ್ಕೋರ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ಬೌಲರ್​ಗಳಿಗೆ ಸಲ್ಲಬೇಕು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಆರ್​ಸಿಬಿ ತಂಡದ ನಾಯಕನಾಗಿ ಯಶಸ್ಸು ಸಾಧಿಸುತ್ತಿರುವ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಅವರನ್ನು ಮುನ್ನಡೆಸಿದಾಗ ಅದ್ಭುತವೆನಿಸುತ್ತದೆ. ಇದು ನನ್ನ ಕಲಿಕೆಯ ಸಮಯ. ಇದರೊಂದಿಗೆ ಜಯವನ್ನು ಅಸ್ವಾದಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here