ಐಪಿಎಲ್ 2025 ರ ಎರಡನೇ ಪಂದ್ಯ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯ ಹೈದರಾಬಾದ್ನಲ್ಲಿ ನಡೆಯಲಿದ್ದು, ಎರಡೂ ತಂಡಗಳು ಲೀಗ್ನ 18 ನೇ ಋತುವಿನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿವೆ.
ಹೈದರಾಬಾದ್, ಕಳೆದ ಐಪಿಎಲ್ನಲ್ಲಿ ಒಂದರ ನಂತರ ಒಂದರಂತೆ ಮೂರು ದಾಖಲೆಗಳನ್ನು ಮುರಿಯುವ ಮೂಲಕ ತನ್ನ ಬ್ಯಾಟಿಂಗ್ ಬಲವನ್ನು ತೋರಿಸಿತ್ತು. ಇದೀಗ ಆ ಸೀಸನ್ನಲ್ಲೂ ಅದೇ ಪ್ರದರ್ಶನವನ್ನು ಮುಂದುವರೆಸಲು ಎದುರು ನೋಡುತ್ತಿದೆ. ಇತ್ತ ರಾಜಸ್ಥಾನ ತಂಡ ಕೂಡ ಗೆಲುವಿನೊಂದಿಗೆ ಸೀಸನ್ ಆರಂಭಿಸಲು ಎದುರು ನೋಡುತ್ತಿದೆ.
ಇನ್ನೂ ಟಾಸ್ ಗೆದ್ದ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಹೈದರಾಬಾದ್ ಮೊದಲು ಬೌಲಿಂಗ್ ಮಾಡಲಿದೆ.
ರಾಜಸ್ಥಾನ ತಂಡ
ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೈರ್, ಶುಭಂ ದುಬೆ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಫಜಲ್ಹಕ್ ಫಾರೂಕಿ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ.
ಹೈದರಾಬಾದ್ ತಂಡ
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸಿಮರ್ಜಿತ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ.