ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ.
20 ಪಂದ್ಯಗಳ ವೇಳಾಪಟ್ಟಿ ಕ್ರಿಕೆಟ್ ಪ್ರೇಮಿಗಳಿಗೆ ಸಂಭ್ರಮವನ್ನು ತಂದುಕೊಡುತ್ತಿದೆ. ಐಪಿಎಲ್ ಹಬ್ಬ ಮಾರ್ಚ್ 28ರಿಂದ ಪ್ರಾರಂಭವಾಗಲಿದ್ದು, ಮೊದಲ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾತ್ರಿ 7.30ಕ್ಕೆ ನಡೆಯಲಿದೆ.
ದೇಶದ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಸದ್ಯಕ್ಕೆ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಟೂರ್ನಿಯ ಉಳಿದ ಪಂದ್ಯಗಳ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿದ್ದರು. ಆದರೆ ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳು ಮೃತಪಟ್ಟಿದ್ದರಿಂದ ಬೆಂಗಳೂರಿನಲ್ಲಿ ಐಪಿಎಲ್ ನಡೆಸದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ ಆರ್‌ಸಿಬಿ ಕೂಡ ಬೆಂಗಳೂರಿನಲ್ಲಿ ತನ್ನ ತವರು ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಿತ್ತು. ಆದರೆ ಕೆಎಸ್ಸಿಎ ಹೊಸ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ತಂಡ ಕರ್ನಾಟಕ ಸರ್ಕಾರ ಹಾಗೂ ಆರ್‌ಸಿಬಿ ಮ್ಯಾನೇಜ್ಮೆಂಟ್ ಒಪ್ಪಿಸುವಲ್ಲಿ ಸಫಲವಾಗಿದ್ದು, ಐಪಿಎಲ್ ಮೂಲಕವೇ ರದ್ದಾಗಿದ್ದ ಕ್ರಿಕೆಟ್ ಇದೀಗ ಐಪಿಎಲ್ ಮೂಲಕವೇ ಚಿನ್ನಸ್ವಾಮಿಗೆ ಮರಳುತ್ತಿವೆ.
ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ:
- ಮಾರ್ಚ್ 28: RCB vs ಸನ್‌ರೈಸರ್ಸ್ ಹೈದರಾಬಾದ್ – ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
- ಮಾರ್ಚ್ 29: ಮುಂಬೈ ಇಂಡಿಯನ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ – ವಾಂಖೇಡೆ
- ಮಾರ್ಚ್ 30: ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಗುವಾಹಟಿ
- ಮಾರ್ಚ್ 31: ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟನ್ಸ್ – ನ್ಯೂ ಚಂಡೀಗಡ
- ಏಪ್ರಿಲ್ 1: ಲಕ್ನೋ ಸೂಪರ್ ಜೈಂಟ್ಸ್ vs ಆರ್‌ಸಿಬಿ – ಲಕ್ನೋ
- ಏಪ್ರಿಲ್ 2: ಕೊಲ್ಕತ್ತಾ vs ಸನ್‌ರೈಸರ್ಸ್ ಹೈದರಾಬಾದ್ – ಕೊಲ್ಕತ್ತಾ
- ಏಪ್ರಿಲ್ 3: ಚೆನ್ನೈ vs ಪಂಜಾಬ್ ಕಿಂಗ್ಸ್ – ಚೆನ್ನೈ
- ಏಪ್ರಿಲ್ 4: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ – ಡೆಲ್ಲಿ
- ಏಪ್ರಿಲ್ 4: ಗುಜರಾತ್ ಟೈಟನ್ಸ್ vs ರಾಜಸ್ಥಾನ್ ರಾಯಲ್ಸ್ – ಅಹಮದಾಬಾದ್
- ಏಪ್ರಿಲ್ 5: ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ – ಹೈದರಾಬಾದ್
- ಏಪ್ರಿಲ್ 5: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ – ಬೆಂಗಳೂರು
- ಏಪ್ರಿಲ್ 6: ಕೊಲ್ಕತ್ತಾ vs ಪಂಜಾಬ್ ಕಿಂಗ್ಸ್ – ಕೊಲ್ಕತ್ತಾ
- ಏಪ್ರಿಲ್ 7: ರಾಜಸ್ಥಾನ್ vs ಮುಂಬೈ – ಗುವಾಹಟಿ
- ಏಪ್ರಿಲ್ 8: ಡೆಲ್ಲಿ vs ಗುಜರಾತ್ – ಡೆಲ್ಲಿ
- ಏಪ್ರಿಲ್ 9: ಕೊಲ್ಕತ್ತಾ vs ಲಕ್ನೋ – ಕೊಲ್ಕತ್ತಾ
- ಏಪ್ರಿಲ್ 10: ರಾಜಸ್ಥಾನ್ vs ಆರ್‌ಸಿಬಿ – ಗುವಾಹಟಿ
- ಏಪ್ರಿಲ್ 11: ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ನ್ಯೂ ಚಂಡೀಗಡ
- ಏಪ್ರಿಲ್ 11: ಚೆನ್ನೈ vs ಡೆಲ್ಲಿ ಕ್ಯಾಪಿಟಲ್ಸ್ – ಚೆನ್ನೈ
- ಏಪ್ರಿಲ್ 12: ಲಕ್ನೋ vs ಗುಜರಾತ್ – ಲಕ್ನೋ
- ಏಪ್ರಿಲ್ 12: ಮುಂಬೈ vs ಆರ್‌ಸಿಬಿ – ಮುಂಬೈ
ಐಪಿಎಲ್ ಪ್ರೇಮಿಗಳಿಗೆ ಈ ಮೊದಲ ಹಂತದ ಪಂದ್ಯಗಳು ಕ್ರಿಕೆಟ್ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಂತಿವೆ.



