ಬೆಂಗಳೂರು:- IPS ಅಧಿಕಾರಿಗಳ ಜಟಾಪಟಿ ಮುಂದುವರಿದಿದ್ದು, ಡಿ.ರೂಪಾ ವಿರುದ್ಧ ಆರೋಪ ಮಾಡಿದ್ದ ವರ್ತಿಕಾ ಕಟಿಯಾರ್ ಅವರನ್ನು ಇತ್ತೀಚೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ಬೆನ್ನಲ್ಲೇ ಇಂದು ಡಿ.ರೂಪಾರನ್ನು ಐಎಸ್‌ಡಿಯಿಂದ ವರ್ಗಾವಣೆ ಮಾಡಲಾಗಿದೆ. ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ ಎಂಡಿಯಾಗಿ ಡಿ. ರೂಪಾ ರನ್ನು ವರ್ಗಾವಣೆ ಮಾಡಲಾಗಿದೆ.
ಇನ್ನೂ ಫೆ.೨೦ ರಂದು ವರ್ತಿಕಾ ಕಟಿಯಾರ್ ೨೦೦೦ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಡಿ.ರೂಪಾ ವಿರುದ್ಧ ಸಿಎಸ್‌ಗೆ ದೂರು ನೀಡಿದ್ದರು. ಕಳೆದ ವರ್ಷದ ಸೆ.೬ರಂದು ತಮ್ಮ ಅನುಮತಿಯಿಲ್ಲದೇ ಚೇಂಬರ್‌ನಿಂದ ಮಹತ್ವದ ಕಡತಗಳನ್ನು ಪೊಲೀಸ್ ಸಿಬ್ಬಂದಿಯಿಂದ ಡಿ. ರೂಪಾ ತರಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಎರಡು ದಿನಗಳ ಹಿಂದೆಯಷ್ಟೇ ವರ್ತಿಕಾ ಕಟಿಯಾರ್‌ನ್ನು ಗೃಹರಕ್ಷಕ ಮತ್ತು ಪೌರ ರಕ್ಷಣಾ ದಳದ ಡಿಐಜಿ ಹುದ್ದೆಗೆ ಸರ್ಕಾರ ವರ್ಗಾವಣೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಡಿ.ರೂಪಾರನ್ನು ಐಎಸ್‌ಡಿಯಿಂದ ಕರ್ನಾಟಕ ಸಿಲ್ಕ್ ಬೋರ್ಡ್ ಎಂಡಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ಹಿರಿಯ ಅಧಿಕಾರಿಗಳ ಮುಂದೆಯೇ ಸಭೆ ಕೊಠಡಿಯಲ್ಲಿ ಗಲಾಟೆ ಮಾಡಿಕೊಂಡಿದ್ದ ಐಎಸ್‌ಡಿ ಐಜಿಪಿ ರೂಪಾ ಮೌದ್ಗಿಲ್ ಮತ್ತು ಡಿಐಜಿ ವರ್ತಿಕಾ ಕಟಿಯಾರ್ ಸುದ್ದಿ ಆಗಿದ್ರು.



