ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಿಗ್ ಶಾಕ್!? ಹಾಲಿನ ದರ ಏರಿಕೆ ಬಗ್ಗೆ ಬಮೂಲ್ ಅಧ್ಯಕ್ಷರ ಸುಳಿವು

0
Spread the love

ಬೆಂಗಳೂರು:- ಕರ್ನಾಟಕ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರದಲ್ಲೇ ಹಾಲಿನ ದರ ಏರಿಕೆ ಆಗುವ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

Advertisement

ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಡಿಮೆ ಬೆಲೆ ಇದೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ ಇನ್ನೂ‌ ಹೆಚ್ಚಿದೆ. ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ನಾವು ಮಂಡಳಿಗೆ ಮನವಿ ಸಲ್ಲಿಸಿದ್ದೇವೆ ಇಷ್ಟು ಅಂತ ದರದ ಬಗ್ಗೆ ಹೇಳಿಲ್ಲ. ಅರ್ಧ ಲೀಟರ್ ಮಾರಿದರೆ ನಷ್ಟವಾಗುತ್ತದೆ. ಒಂದು ಲೀಟರ್ ಹಾಲು ಮಾರಿದರೆ ಲಾಭ ಆಗುತ್ತದೆ ಎಂದು ಹೇಳಿದರು. ತುಪ್ಪ ಇವತ್ತು ದರ ಏರಿಕೆ ಮಾಡಲಾಗಿದೆ. ಬೇರೆ ಕಂಪನಿಯ ಹಾಲು ಆನ್‌ಲೈನ್‌ ಮಾರ್ಕೆಟಿಂಗ್ ಜಾಸ್ತಿ ಆಗಿದ್ದು, ನಾವು ರೈತರಿಗೆ ಹಾಲು ಕೂಡಲೇ ಹಣ ಕೊಡಬೇಕು. ಬೇರೆ ರಾಜ್ಯಗಳು ಹೆಚ್ಚು ಹಣ ಬಾಕಿ ಉಳಿಸಿಕೊಂಡಿಲ್ಲ ಅನ್ಸುತ್ತೆ ಎಂದು ಹಾಲಿನ ದರ ಏರಿಕೆ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.

ನಮ್ಮಲ್ಲಿ 95 ಲಕ್ಷದಿಂದ 1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗುತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ಆಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರುಪಾಯಿಯನ್ನ ರೈತರಿಗೆ ಕೊಡಲು ಸೂಚಿಸಿದ್ದೇವೆ. 50 ಲಕ್ಷ ಲೀಟರ್ ಮಾರಾಟ ಮಾಡುವುದಕ್ಕೆ ಮಾತ್ರ ನಮಗೆ ಹಣ ಬರುತ್ತಿದೆ. ಉಳಿದ 50 ಲಕ್ಷ ಲೀಟರ್ ಹಾಲಿಗೆ ನಮ್ಮ ಕೈಯಿಂದ ರೈತರಿಗೆ ಹಣ ಕೊಡುತ್ತಿದ್ದೇವೆ ಎಂದು ತಿಳಿಸಿದರು. ಸದ್ಯ ಬೆಣ್ಣೆ ಮತ್ತು ತುಪ್ಪಕ್ಕೆ ಬೇಡಿಕೆ ಇದ್ದು ಈಗ ನಾವು ತುಪ್ಪಕ್ಕೆ ನಿಗದಿ ಮಾಡಿರುವ ಮಾರುಕಟ್ಟೆಗಿಂತ ಕಡಿಮೆಯಿದೆ. ಆದರೆ ಗುಣಮಟ್ಟದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ. ಒಕ್ಕೂಟಗಳ ಮನವಿ ಮೇರೆಗೆ ತುಪ್ಪದ ದರ ಜಾಸ್ತಿ ಮಾಡಲಾಗಿದೆ. ಹಾಲಲ್ಲೂ ಕೆಲವು ಕಡೆ ನಮಗೆ ನಷ್ಟವಾಗುತ್ತಿದೆ. ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡಬೇಕಿದೆ. ನಮಗೆ ಹಾಲು ಉತ್ಪಾದಕರು ಹಾಗೂ ಒಕ್ಕೂಟಗಳು ದರ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here