ಬೆಂಗಳೂರು: ದಿನೇಶ್ ಗುಂಡೂರಾವ್ ಆರೋಗ್ಯ ಮಂತ್ರಿ ಆಗಲು ಯೋಗ್ಯರು ಇದ್ದೀರಾ? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಆರೋಗ್ಯ ಮಂತ್ರಿ ಆಗಲು ಯೋಗ್ಯರು ಇದ್ದೀರಾ? ಅವರೇ ವೈದ್ಯರಾ? ನಾವು ಸದನದಲ್ಲಿ ವೆಟನರಿ ಔಷಧಿ ಕೊಟ್ರು ಅಂತ ಆರೋಪ ಮಾಡಿದಾಗ ಯೂಟರ್ನ್ ಹೊಡೆದಿದ್ರಿ.
Advertisement
ಈಗ ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಮತ್ತು ದ್ರಾವಣ ಕೂಡ ಕಳಪೆ ಆಗಿದೆ ಅಂತ ರಿಪೋರ್ಟ್ ಬಂದಿದೆ. ಹೀಗಿದ್ರು ದಿನೇಶ್ ಗುಂಡೂರಾವ್ ಬದಲಾವಣೆ ಮಾಡಿಲ್ಲ. ಆರೋಗ್ಯ ಇಲಾಖೆ ಅವರು ಜನರ ಜೀವಗಳ ಜೊತೆ ಆಟ ಆಡ್ತಿದ್ದಾರೆ. ಕೂಡಲೇ ದಿನೇಶ್ ಗುಂಡೂರಾವ್‌ರನ್ನ ವಜಾ ಮಾಡಬೇಕು ಅಂತ ಸಿಎಂರನ್ನ ಒತ್ತಾಯಿಸಿದ್ದಾರೆ.