Raw Egg: ಹಸಿ ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ಉತ್ತರ

0
Spread the love

ನಿಸ್ಸಂದೇಹವಾಗಿ ಮೊಟ್ಟೆಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಕೇವಲ ಮಾಂಸಾಹಾರಿಗಳು ಮಾತ್ರವಲ್ಲ ಸಸ್ಯಹಾರಿ ಜನರು ಕೂಡ ಉತ್ತಮವಾದ ದೇಹ ಆರೋಗ್ಯಕ್ಕೆ ಮೊಟ್ಟೆಗಳನ್ನು ಸೇವನೆ ಮಾಡುತ್ತಾರೆ. ಮೊಟ್ಟೆಗಳಲ್ಲಿ ಅನೇಕ ರುಚಿ ರುಚಿಯಾದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಒಂದು ವಿಧದಲ್ಲಿ ಮೊಟ್ಟೆಗಳು ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ, ದೇಹದ ತೂಕವನ್ನು ಕಡಿಮೆ ಮಾಡಲು ಸಾಕಷ್ಟು ಶ್ರಮಿಸುತ್ತದೆ. ಮುಖ್ಯವಾಗಿ ಸಾಕಷ್ಟು ಮಂದಿ ಮೊಟ್ಟೆಗಳನ್ನು ಹಸಿ ಹಸಿಯಾಗಿ ಸೇವನೆ ಮಾಡಲು ಇಷ್ಟ ಪಡುತ್ತಾರೆ.

Advertisement

ಆದರೆ ಅನೇಕ ಮಂದಿ ಮೊಟ್ಟೆ ಒಡೆದು ಕುಡಿದರೆ ಒಳ್ಳೆಯದಾ? ಬೇಯಿಸಿ ತಿನ್ನುವುದು ಉತ್ತಮನಾ? ಇಲ್ಲದಿದ್ದರೆ ಆಫ್ ಬಾಯ್ಡ್ ಮಾಡಿಕೊಂಡು ತಿನ್ನಬೇಕಾ? ಎಂಬ ಗೊಂದಲ ಹೊಂದಿದ್ದಾರೆ. ಹಾಗಾಗಿ ನಾವಿಂದು ಈ ಕುರಿತ ಕೆಲವೊಂದಷ್ಟು ಮಾಹಿತಿಯನ್ನು ನೀಡುತ್ತೇವೆ.

ಮೊಟ್ಟೆಯನ್ನು ಸುಲಭವಾಗಿ ತಯಾರಿಸಬಹುದಾದ ಆಹಾರವಾಗಿದ್ದು, ಇದನ್ನು ಬೇಯಿಸದೇ ಹಸಿಯಾಗಿ ಕೂಡ ಸೇವಿಸಬಹುದು. ಮೊಟ್ಟೆ ಪ್ರೋಟೀನ್ ರೈಬೋಫ್ಲಾವಿನ್, ಫೋಲೇಟ್, ಕಬ್ಬಿಣ, ರಂಜಕ, ಸೆಲೆನಿಯಮ್, ಮೆಗ್ನೀಸಿಯಮ್, ವಿಟಮಿನ್ ಎ, ಇ, ಬಿ 6 ಸೇರಿದಂತೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಅವು ಸ್ನಾಯು ಮತ್ತು ಅಂಗಾಂಶಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಮೊಟ್ಟೆಗಳನ್ನು ಪ್ರತಿದಿನ ತಿನ್ನುವುದರಿಂದ ನಮ್ಮ ದೇಹದಲ್ಲಿನ ಮೂಳೆಗಳ ಬಲವು ಹೆಚ್ಚಾಗುತ್ತದೆ. ಮೊಟ್ಟೆಗಳಲ್ಲಿ ಕ್ಯಾರೊಟಿನಾಯ್ಡ್ಗಳು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಸಮೃದ್ಧವಾಗಿದೆ.

ಆದರೆ ಹಸಿ ಮೊಟ್ಟೆ ಕುಡಿಯುವುದರಿಂದ ದೇಹದ ಮೇಲೆ ವಿವಿಧ ಅಡ್ಡ ಪರಿಣಾಮಗಳು ಬೀರಬಹುದು. ಬೇಯಿಸದ ಮೊಟ್ಟೆಯಲ್ಲಿ 10% ಪ್ರೋಟೀನ್ ಮತ್ತು 90% ನೀರು ಇರುತ್ತದೆ. ಮೊಟ್ಟೆಯ ಬಿಳಿಭಾಗವನ್ನು ಹಸಿಯಾಗಿ ಸೇವಿಸಿದರೆ ಕೆಲವರಿಗೆ ಅಲರ್ಜಿ ಸಮಸ್ಯೆ ಉಂಟಾಗಬಹುದು.

ನಿಜಕ್ಕೂ ಬೇಯಿಸಿದ ಮೊಟ್ಟೆ ಉತ್ತಮವೋ ಅಥವಾ ಬೇಯಿಸದ ಹಸಿ ಮೊಟ್ಟೆ ಉತ್ತಮವೋ? ಎಂದು ಅನೇಕ ಮಂದಿ ಗೊಂದಲಕ್ಕೆ ಆಫ್-ಬಾಯ್ಲ್ಡ್ ಮೊಟ್ಟೆ ಬೆಸ್ಟ್ ಎಂದೇ ಹೇಳಬಹುದು. ಮೊಟ್ಟೆಯಲ್ಲಿರುವ ಕೋಲೀನ್ ನರಮಂಡಲ ಮತ್ತು ಹೃದಯರಕ್ತನಾಳದ ವ್ಯವಸ್ಥೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿರುವ ಲುಟೀನ್ ಎಂಬ ಆ್ಯಂಟಿಆಕ್ಸಿಡೆಂಟ್ ಕಣ್ಣಿನ ಕಾಯಿಲೆಗಳು ಮತ್ತು ಕಣ್ಣಿನ ಪೊರೆಗಳನ್ನು ತಡೆಯುತ್ತದೆ.


Spread the love

LEAVE A REPLY

Please enter your comment!
Please enter your name here