ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಏಕಾಏಕಿ ಹೊರ ಬಂದಿದ್ದಾರೆ. ಮನೆಯ ಕ್ಯಾಪ್ಟನ್ ಆಗಿದ್ದ ವೇಳೆಯೇ ಸುರೇಶ್ ತುರ್ತು ಕಾರಣದಿಂದಾಗಿ ದೊಡ್ಮನೆಯಿಂದ ಹೊರ ಬಂದಿದ್ದರು. ಇದೀಗ ಈ ಬಗ್ಗೆ ಗೋಲ್ಡ್ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ನನಗೆ ಬಿಗ್ ಬಾಸ್ ಕಡೆಯಿಂದ ಅವಕಾಶ ಬಂದಾಗ ಮೊದಲೇ ಯೋಚನೆ ನನಗೆ ಶುರುವಾಗಿತ್ತು. ನಾನು ಒಳಗೆ ಹೋದ್ರೆ ನನ್ನ ಬ್ಯುಸಿನೆಸ್ ಯಾರಿಗೆ ಬಿಟ್ಟು ಹೋಗಲಿ ಅಂತ. ಆಗ ನನ್ನ ವ್ಯವಹಾರವನ್ನು ನನ್ನ ಪತ್ನಿಗೆ ಬಿಟ್ಟು ಹೋಗಿದ್ದೆ, ಆದರೆ ಬ್ಯುಸಿನೆಸ್ ಅನ್ನು ಹ್ಯಾಂಡಲ್ ಮಾಡೋಕೆ ಬರಲಿಲ್ಲ. ಅದರ ಬಗ್ಗೆ ಜ್ಞಾನನೇ ಇಲ್ಲದಿರೋ ವ್ಯಕ್ತಿಗೆ ನಾನು ವಹಿಸಿ ಬಂದಿದ್ದೆ, ಅದಕ್ಕೆ ಪತ್ನಿಗೆ ನಿರ್ವಹಿಸಲು ಆಗಿಲ್ಲ. ನನ್ನ ಕಂಪನಿಯಲ್ಲಿ ಕೆಲ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಾನೇ ಹೊರಗೆ ಬರಬೇಕಾಯಿತು. ಅದು ಬಿಟ್ಟು ಆತಂಕ ಪಡುವಂತಹದ್ದು ಏನು ಆಗಿಲ್ಲ ಎಂದಿದ್ದಾರೆ.
ಈ ವೇಳೆ, ತಂದೆ ಆರೋಗ್ಯದ ಬಗ್ಗೆ ಕೂಡ ಸುರೇಶ್ ಸ್ಪಷ್ಟನೆ ನೀಡಿದರು. ಅಪ್ಪ ಆರೋಗ್ಯವಾಗಿದ್ದಾರೆ. ಅವರಿಗೇನು ಆಗಿಲ್ಲ. ಅವರ ಬಗ್ಗೆ ತಪ್ಪು ಸಂದೇಶ ಯಾರಿಗೂ ಹೋಗಬಾರದು ಅನ್ನೋದು ನನ್ನ ಅಭಿಪ್ರಾಯ. ಯಾರೇ ವ್ಯಕ್ತಿಯ ಸಾವಿನ ಸುದ್ದಿ ಹರಡುತ್ತಿದೆ ಎಂದರೆ ಸತ್ಯ ಯಾವುದು ಸುಳ್ಳು ಯಾವುದು ಎಂದು ಸ್ಪಷ್ಟನೆ ತೆಗೆದುಕೊಳ್ಳಬೇಕು ಎಂದಿದ್ದಾರೆ.