ಹಾಸನ:“ನಾನು ಜೆಡಿಎಸ್ ಬಿಟ್ಟಿದ್ದಕ್ಕೆ ದ್ರೋಹ ಅಂತೆ. ಆದರೆ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ಕೊಡ್ತೀನಿ ಅಂತ ಹೇಳಿ ಮೋಸ ಮಾಡಿದ್ರಲ್ಲಾ – ಅದು ದ್ರೋಹ ಅಲ್ಲವಾ?” ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಅರಸೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ವಿರುದ್ಧ ಸಮಾವೇಶ ಮಾಡಿ ಬೈದ್ರು. ಗೌಡರ ಮಕ್ಕಳು ಭಾಷಣ ಮಾಡಿದರು. ದೇವೇಗೌಡರ ಬಗ್ಗೆ ಗೌರವ ಇದೆ, ಅವರ ಬಗ್ಗೆ ಮಾತಾಡಲ್ಲ. ಆದರೆ ಕುಟುಂಬ ರಾಜಕಾರಣಕ್ಕೆ ಬೇಸತ್ತು ಪಕ್ಷ ಬಿಟ್ಟೆ” ಎಂದು ಬಹಿರಂಗ ಆರೋಪ ಮಾಡಿದರು.
ಇನ್ನೂ, “ನಾನು ಮಂತ್ರಿಯಾಗಲೇಬೇಕು ಅನ್ನೋ ಆಸೆ ಇದೆ. ನಿಮಗೆ ಆಸೆ ಇರಬಹುದು, ನನಗೂ ಇದೆ. ಅರಸೀಕೆರೆಯ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಹೋದೆ. ಜೆಡಿಎಸ್ ಬಿಜೆಪಿ ಜೊತೆ ಹೋಗಿದ್ರೆ ತಪ್ಪಿಲ್ಲ ಅಂದ್ರೆ, ನಾನು ಕಾಂಗ್ರೆಸ್‌ಗೆ ಹೋದ್ರೆ ತಪ್ಪಾ?” ಎಂದು ಪ್ರಶ್ನಿಸಿದರು.
“ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಎಷ್ಟು ಪ್ರಚಾರ ಮಾಡಿದ್ರೂ 50 ಸಾವಿರ ಮತವೂ ಬರಲ್ಲ” ಎಂದು ಭವಿಷ್ಯ ನುಡಿದಿದ್ದು, ಈ ಹೇಳಿಕೆಗಳು ಜೆಡಿಎಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.



