ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನವೂ ವಿವಿಧ ರೀತಿಯ ಕನಸುಗಳನ್ನ ಕಾಣುತ್ತಾನೆ. ನಿದ್ರೆಯಲ್ಲಿ ವಿವಿಧ ಅರ್ಥವಿಲ್ಲದ ಕನಸುಗಳನ್ನ ಕಾಣುತ್ತಾನೆ. ಈ ಕನಸುಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ. ಈ ಕನಸುಗಳಲ್ಲಿ ಕೆಲವು ಮಂಗಳಕರವಾಗಿದ್ದರೆ, ಇನ್ನೂ ಕೆಲವು ಅಶುಭವೆಂದು ಪರಿಗಣಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರ ಮತ್ತು ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ಹಾವನ್ನು ಕಂಡರೆ ಅದನ್ನ ಪ್ರಮುಖವೆಂದು ಪರಿಗಣಿಸಲಾಗಿದೆ. ಏಕೆಂದರೆ ಹಿಂದೂ ಧರ್ಮದಲ್ಲಿ ಹಾವುಗಳಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಇದರೊಂದಿಗೆ ಹಾವುಗಳನ್ನು ಸಂಪತ್ತಿನ ರಕ್ಷಕನೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಹಾವನ್ನು ಕಾಣುವುದು ವಿಶೇಷ ಸೂಚನೆಗಳನ್ನು ನೀಡುತ್ತದೆ.
ಭಯಾನಕ ಕನಸುಗಳು ನಿಮ್ಮನ್ನು ನಿದ್ದೆಯಿಂದ ಎಚ್ಚರಗೊಳ್ಳುತ್ತವೆ ಮಾಡುತ್ತವೆ. ಅದರಂತೆ ಸಾಕಷ್ಟು ಜನರಿಗೆ ಕನಸಿನಲ್ಲಿ ಹಾವು ಕಚ್ಚಿದಂತೆ ಕಂಡಿರಬಹುದು. ಕನಸಿನಲ್ಲಿ ಹಾವು ಕಡಿತವನ್ನು ಆಳವಾದ ಕನಸು ಎಂದು ಪರಿಗಣಿಸಲಾಗುತ್ತದೆ. ಇದು ಅನೇಕ ಅರ್ಥಗಳನ್ನು ಹೊಂದಿದೆ.
ಕನಸಿನಲ್ಲಿ ಹಾವು ಕಚ್ಚಿದಂತೆ ಕಂಡರೆ ಅವು ಏನನ್ನು ಸೂಚಿಸುತ್ತದೆ ಮತ್ತು ಅದಕ್ಕೆ ಯಾವ ವಿಭಿನ್ನ ಅರ್ಥಗಳಿವೆ ಎಂದು ತಿಳಿಯೋಣ. ಕೆಲವೊಮ್ಮೆ ಅದು ನಿಮಗೆ ಏನಾದರೂ ಒಳ್ಳೆಯದು ಸಂಭವಿಸಲಿದೆ ಎಂದು ಸೂಚಿಸುತ್ತದೆ, ಕೆಲವೊಮ್ಮೆ ಅದು ನಿಮಗೆ ಎಚ್ಚರಿಕೆಯ ಗಂಟೆಯೂ ಸಹ ಆಗಿರಬಹುದು.
ಕೋಪದ ಸಂಕೇತ:
ಕನಸಿನಲ್ಲಿ ಹಾವು ಕಚ್ಚಿದಂತೆ ಕಾಣುವುದು ಯಾರೊಬ್ಬರ ಮೇಲಿನ ಕೋಪದ ಸಂಕೇತವಾಗಿರಬಹುದು. ಸ್ವಪ್ನ ಶಾಸ್ತ್ರದ ಪ್ರಕಾರ, ಅದು ನಿಮ್ಮ ಜೀವನದಲ್ಲಿ ಸಮಸ್ಯೆ ಅಥವಾ ಸವಾಲಿನ ಸಂಕೇತ ಎಂದು ಹೇಳಲಾಗುತ್ತದೆ.
ಪಿತೂರಿ ಸಂಕೇತ:
ಕನಸಿನಲ್ಲಿ ಹಾವು ಕಚ್ಚಿದರೆ, ಗುಪ್ತ ಶತ್ರು ಅಥವಾ ವೈರಿ ನಿಮ್ಮ ವಿರುದ್ಧ ಸಂಚು ರೂಪಿಸುತ್ತಿದ್ದಾನೆ ಅಥವಾ ಹಾಗೆ ಮಾಡಬಹುದು ಎಂದು ಸೂಚಿಸುತ್ತದೆ. ಆದ್ದರಿಂದ, ಯಾರಾದರೂ ಅಂತಹ ಕನಸನ್ನು ಕಂಡರೆ, ಈ ಪರಿಸ್ಥಿತಿಯ ಬಗ್ಗೆ ಜಾಗರೂಕರಾಗಿರಿ.
ಗಂಭೀರ ಅನಾರೋಗ್ಯದ ಸಂಕೇತ:
ನಿಮ್ಮ ಕನಸಿನಲ್ಲಿ ಹಾವು ಕಚ್ಚುವುದನ್ನು ನೀವು ನೋಡಿದರೆ, ಭವಿಷ್ಯದಲ್ಲಿ ನೀವು ಗಂಭೀರ ಕಾಯಿಲೆಯಿಂದ ಬಳಲಬಹುದು ಎಂದರ್ಥ.
ಹಾವು ಕಚ್ಚುವುದು ವಿಫಲವಾದರೆ ಅದರ ಅರ್ಥವೇನು?
ಹಾವು ಕಚ್ಚಲು ವಿಫಲವಾದರೆ ಈ ಕನಸು ಒಳ್ಳೆಯ ಸೂಚನೆ. ಅಂತಹ ಕನಸು ಎಂದರೆ ನೀವು ಕೆಲವು ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುವಿರಿ ಎಂದರ್ಥ.