ಟ್ಯಾಟೂ ಹಾಕಿಸಿಕೊಳ್ಳೋ ಕ್ರೇಜ್ ಇದ್ಯಾ!? ಹುಷಾರ್, ಕ್ಯಾನ್ಸರ್ ಬರಬಹುದು!

0
Spread the love

ದೇಹದ ವಿವಿಧ ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಫ್ಯಾಶನ್ ಹಾಕಿಬಿಟ್ಟಿದೆ. ಹೀಗಾಗಿ ಇದೀಗ ದೊಡ್ಡ ನಗರಗಳಲ್ಲಿ ಮತ್ರವಲ್ಲದೆ ಸಣ್ಣ ಪುಟ್ಟ ಪಟ್ಟಣಗಳಲ್ಲೂ ಟ್ಯಾಟೂ ಮಳಿಗೆಗಳು ತೆರೆಯುತ್ತಿವೆ. ನಗರದಿಂದ ಹಿಡಿದು ಹಳ್ಳಿವರೆಗೂ ಯುವಕ, ಯುವತಿಯರು ಇದರ ಮೊರೆ ಹೋಗುತ್ತಿದ್ದಾರೆ. ಆದರೆ ಆರೋಗ್ಯದ ವಿಚಾರಕ್ಕೆ ಬಂದಾಗ ಈ ಟ್ಯಾಟೂ ಹಾಕಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸೇಫ್ ಎನ್ನುವುದನ್ನು ನೀವು ತಿಳಿಯಲೇಬೇಕು.

Advertisement

ಭಾರತದಲ್ಲಿ ಟ್ಯಾಟೂ ಸಂಪ್ರದಾಯ ಇತ್ತಿಚೆಗೆ ಹುಟ್ಟಿಕೊಂಡಿದಲ್ಲ. ಏಕೆಂದರೆ ಭಾರತದಲ್ಲೂ ಬಲು ಹಿಂದಿನಿಂದ ಒಂದು ರೂಢಿ ಚಾಲ್ತಿಯಲ್ಲಿದೆ ಹಾಗೂ ಅದನ್ನು ಹಚ್ಚೆ ಹಾಕಿಸಿಕೊಳ್ಳುವುದೆನ್ನಲಾಗುತ್ತದೆ. ಈ ವಿಷಯ ಏನೇ ಇರಲಿ, ಈಗ ಸದ್ಯ ಬೆಳಕಿಗೆ ಬಂದಿರುವ ವರದಿಯಂತೆ ಟ್ಯಾಟೂಗೆ ಬಳಸಲಾಗುವ ಶಾಯಿಗಳಲ್ಲಿ ರಾಸಾಯನಿಕಗಳಿದ್ದು, ಅವು ಕ್ಯಾನ್ಸರ್ ಕಾರಕ ಎಂಬ ಅಂಶ ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳಲು ಬಯಸುತ್ತಾರೆ. ನೆನಪಿರಲಿ ಟ್ಯಾಟೋ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಕುರಿತು ದೇಹಕ್ಕೆ ಉಂಟಾಗುವ ಹಾನಿಯ ಬಗ್ಗೆ ಚರ್ಮ ತಜ್ಞ ಡಾ.ಎಸ್.ಪಿ.ಸಿಂಗ್ ಹೇಳಿಕೆ ನೀಡಿದ್ದು, ಟ್ಯಾಟೂ ಹಾಕುವಾಗ ಚರ್ಮವು ಗಾಯಗೊಳ್ಳುತ್ತದೆ, ಇದು ಸೋಂಕಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಟ್ಯಾಟೂ ಹಾಕಲು ಬಳಸುವ ಶಾಯಿಯು ಚರ್ಮಕ್ಕೆ ಹಾನಿಕಾರಕವಾದ ರಾಸಾಯನಿಕಗಳನ್ನು ಹೊಂದಿರುತ್ತದೆ. ಟ್ಯಾಟೂ ಹಾಕುವುದರಿಂದ ಚರ್ಮದ ಸೋಂಕು, ಅಲರ್ಜಿ ಮತ್ತು ಸೋರಿಯಾಸಿಸ್ ನಂತಹ ಸಮಸ್ಯೆಗಳು ಉಂಟಾಗಬಹುದು. ಹಚ್ಚೆ ಶುಷ್ಕತೆ, ಕೀವು, ಊತದಂತಹ ಚರ್ಮದ ಸಮಸ್ಯೆಗಳು ಉಂಟಾಗಬಹುದು.

ಟ್ಯಾಟೂ ಸೂಜಿಗಳನ್ನು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದರಿಂದ ಚರ್ಮ ರೋಗಗಳು, ಎಚ್ಐವಿ ಮತ್ತು ಹೆಪಟೈಟಿಸ್ನಂತಹ ರೋಗಗಳು ಹರಡಬಹುದು. ಇದರಿಂದ ಟ್ಯಾಟೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಟ್ಯಾಟೂ ಸ್ನಾಯುಗಳನ್ನು ಹಾನಿಗೊಳಿಸುತ್ತದೆ. ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಸರಿಯಾದ ಮಾಹಿತಿಯನ್ನು ಪಡೆಯಿರಿ.

ಟ್ಯಾಟೂಗೆ ಬಳಸಲಾಗುವ ಶಾಯಿಗಳಲ್ಲಿ ಎರಡು ಘಟಕಾಂಶಗಳಿವೆ, ಒಂದು ಪಿಗ್ಮೆಂಟ್ ಹಾಗೂ ಎರಡನೆಯದ್ದು ಕ್ಯಾರಿಯರ್ ದ್ರಾವಣ. ಪಿಗ್ಮೆಂಟ್ ಎಂಬುದು ಮಾಲೆಕ್ಯೂಲರ್ ಅಥವಾ ಘನ ಘಟಕವಾಗಿದ್ದಾರೆ ಕ್ಯಾರಿಯರ್ ದ್ರವ್ಯವಾಗಿದ್ದು ಇದು ಪಿಗ್ಮೆಂಟ್ ಗಳನ್ನು ಚರ್ಮದ ವಿವಿಧ ಪದರುಗಳಲ್ಲಿ ಸಾಗಿಸುತ್ತದೆ.

ಸಂಶೋಧನಾ ತಂಡವು 16 ಮಾದರಿಗಳ ಶಾಯಿಯನ್ನು ಅವುಗಳಲ್ಲಿರುವ ಕಣಗಳ ಗಾತ್ರದ ಬಗ್ಗೆ ಪರಿಶೀಲಿಸಿದಾಗ 50% ಶಾಯಿಗಳಲ್ಲಿ ಕಣಗಳು 100 ನ್ಯಾನೋಮೀಟರ್ ಗಳಿಗಿಂತಲೂ ಚಿಕ್ಕವಾಗಿರುವುದು ಕಂಡುಬಂದಿದೆ. ಏಕೆಂದರೆ ಅಷ್ಟು ಚಿಕ್ಕ ಗಾತ್ರದ ಕಣಗಳು ಚರ್ಮದ ಕೋಶಗಳ ಮೂಲಕ ಒಳಗೆ ಸುಲಭವಾಗಿ ಪ್ರವೇಶಿಸಬಹುದಾಗಿವೆ. ಇದು ನಿಜಕ್ಕೂ ಕ್ಯಾನ್ಸರ್ ರೀತಿಯ ಪ್ರಭಾವ ಬೀರಬಹುದು.

ಟ್ಯಾಟೂ ಹಾಕಿಸಿದ ಬಳಿಕ ಅದನ್ನು ಸ್ವಚ್ಛಗೊಳಿಸಿ ಆರೈಕೆ ಮಾಡಬೇಕು. ಅದಕ್ಕಾಗಿ ನಿಮ್ಮ ಹಚ್ಚೆಯ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿ ಸೌಮ್ಯವಾದ ಕ್ಲೆನ್ಸರ್ ಮತ್ತು ನೀರಿನಿಂದ ದಿನಕ್ಕೆ ಎರಡು ಬಾರಿ ತೊಳೆಯಿರಿ. ಅದನ್ನು ಸ್ವಚ್ಛಗೊಳಿಸಿ ಮತ್ತು ಒಣಗಿಸಿ. ನಿಮ್ಮ ವೈದ್ಯರು ಸೂಚಿಸಿದ ಆಂಟಿಮೈಕ್ರೊಬಿಯಲ್ ಮುಲಾಮುವನ್ನು ಬಳಸಿ.


Spread the love

LEAVE A REPLY

Please enter your comment!
Please enter your name here