ಬೆಕ್ಕು ಅಡ್ಡ ಬಂದ್ರೆ ಅಪಶಕುನವಾ!? ಇದರ ಹಿಂದಿನ ವೈಜ್ಞಾನಿಕ ಕಾರಣ ನೀವು ತಿಳಿಯಲೇಬೇಕು!?

0
Spread the love

ನಮ್ಮ ಜೀವನದಲ್ಲಿ ದಿನನಿತ್ಯ ನಡೆಯುವ ಘಟನೆಗಳನ್ನು ಕೆಲವರು ಶುಭವೆಂದು ಹಾಗೂ ಇನ್ನು ಕೆಲವರು ಅಶುಭವೆಂದು ನಂಬುತ್ತಾರೆ. ಇದು ಕೇವಲ ವಸ್ತುಗಳಿಗಾಗಲಿ, ಘಟನೆಗಳಿಗಾಗಲಿ ಸೀಮಿತವಾಗಿಲ್ಲ. ಬದಲಾಗಿ, ಕೆಲವೊಂದು ಜೀವಿಗಳನ್ನು ಕೂಡ ಒಳಗೊಂಡಿದೆ. ಪ್ರಾಣಿಗಳಿಗೆ ಸಂಬಂಧಿಸಿದಂತೆ ನಾವು ಹೆಚ್ಚಾಗಿ ಬೆಕ್ಕುಗಳು ನಮ್ಮ ದಾರಿಗೆ ಅಡ್ಡ ಬಂದರೆ ಅದನ್ನು ಅಶುಭ ಸಂದರ್ಭವೆಂದು ಪರಿಗಣಿಸುತ್ತೇವೆ.

Advertisement

ಎಲ್ಲಾದರು ಹೊರಡುವಾಗ ಅಥವಾ ಹೊರಟು ನಿಂತಾಗ ಬೆಕ್ಕು ಅಡ್ಡಬಂದರೆ ಕೆಲವರು ಅದನ್ನು ಅಪಶಕುನ ಎಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಕೆಲವರು ಸ್ವಲ್ಪ ಸಮಯದವರೆಗೆ ನಿಂತರೆ, ಇನ್ನೂ ಕೆಲವರು ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ಬೆಕ್ಕು ಅಡ್ಡ ಬಂದರೆ ಆ ದಾರಿಯಲ್ಲಿ ಹೋಗಬಾರದು, ಹೋದರೆ ಅಹಿತಕರ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಇದೆ.

ಆದರೆ ಪ್ರಪಂಚದ ಕೆಲವು ದೇಶಗಳಲ್ಲಿ ಬೆಕ್ಕನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ ಎಂಬ ವಿಚಾರ ತಿಳಿದರೆ ಶಾಕ್ ಆಗುತ್ತೀರಿ. ಏಕೆಂದರೆ ಬೆಕ್ಕುಗಳು ಅವರಿಗೆ ಶುಭ. ಹಾಗಾಗಿ ಅದೆಷ್ಟೋ ಮಂದಿ ಬೆಕ್ಕುಗಳನ್ನು ಮನೆಯಲ್ಲಿ ಸಾಕುತ್ತಾರೆ.

ಒಂದು ವೇಳೆ ನೀವು ಎಲ್ಲಾದರೂ ತೆರಳುವಾಗ ಅಥವಾ ರಸ್ತೆಯಲ್ಲಿ ಬೆಕ್ಕು ಅಡ್ಡಬಂದರೆ, ಮೂಢನಂಬಿಕೆಯನ್ನು ಬದಿಗೊತ್ತಿ, ಅದರ ಹಿಂದಿರುವ ವೈಜ್ಞಾನಿಕ ಕಾರಣವನ್ನು ಪತ್ತೆ ಹಚ್ಚಿ.

ಪ್ರಾಚೀನ ಕಾಲದಲ್ಲಿ ಮನೆಗೆ ಬೆಕ್ಕು ಬಂದರೆ ನಕಾರಾತ್ಮಕ ಶಕ್ತಿ ಬರುತ್ತದೆ ಎಂದು ನಂಬಲಾಗಿತ್ತು. ವೈದಿಕ ಜ್ಯೋತಿಷ್ಯದ ಪ್ರಕಾರ, ಬೆಕ್ಕು ರಾಹುವಿನ ವಾಹನವಾಗಿದೆ. ಅದಕ್ಕಾಗಿಯೇ ಬೆಕ್ಕು ರಸ್ತೆ ದಾಟಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಏಕೆಂದರೆ ಬೆಕ್ಕು ದಾರಿ ದಾಟುತ್ತದೆ ಎಂದರೆ ರಾಹುವಿನ ಪ್ರಭಾವವಿದೆ. ರಾಹುವು ಅಪಘಾತಗಳನ್ನು ಉಂಟುಮಾಡಬಹುದು. ಬೆಕ್ಕು ರಸ್ತೆ ದಾಟಿದರೆ ಅದು ಅಪಘಾತಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಇನ್ನೂ ಈ ಬಗ್ಗೆ ವಿಜ್ಞಾನ ಹೇಳುವುದೇ ಬೇರೆ, ವಾಸ್ತವವಾಗಿ ಬೆಕ್ಕುಗಳು ಇಲಿಗಳು ಸೇರಿದಂತೆ ಅನೇಕ ಕೀಟಗಳನ್ನು ತಿನ್ನುತ್ತವೆ. ತಿಂದ ನಂತರ ಅಲ್ಲಿ ಇಲ್ಲಿ ತಿರುಗಾಡುವ ಮೂಲಕ ಸೋಂಕು ಹರಡುವ ಅಪಾಯವಿದೆ. ಹೀಗಾಗಿ ಜನರು ಬೆಕ್ಕುಗಳಿಂದ ದೂರವಿರಲು ಇಷ್ಟಪಡುತ್ತಿದ್ದರು.

ಆದರೆ ಈ ನಂಬಿಕೆ ಕ್ರಮೇಣ ಮೂಢನಂಬಿಕೆಯಾಗಿ ಬದಲಾಯಿತು. ರಸ್ತೆಯಲ್ಲಿ ಬೆಕ್ಕು ಅಡ್ಡ ಬಂದರೆ ಕೆಟ್ಟ ಶಕುನ ಎಂಬ ಸುದ್ದಿ ಹರಡಿತು.

ಪ್ಲೇಗ್ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಬೆಕ್ಕುಗಳು ಅಡ್ಡ ಬಂದರೆ, ಆ ರಸ್ತೆ ಬಿಟ್ಟು ಬದಲಿ ಮಾರ್ಗದಲ್ಲಿ ಜನ ಹೋಗುತ್ತಿದ್ದರು. ಏಕೆಂದರೆ ಬೆಕ್ಕುಗಳು ಇಲಿಗಳನ್ನು ತಿನ್ನುತ್ತವೆ ಮತ್ತು ಈ ಪ್ಲೇಗ್ ಇಲಿಗಳಿಂದ ಹರಡುತ್ತದೆ. ಹಾಗಾಗಿ ಬೆಕ್ಕುಗಳು ಅಡ್ಡ ಬಂದರೆ ಪ್ಲೇಗ್ ಹರಡುವ ಭೀತಿಯ ಕಾರಣ ಪ್ಲೇಗ್ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಬೆಕ್ಕುಗಳು ರಸ್ತೆ ದಾಟುವುದನ್ನು ನಿಷೇಧಿಸಲಾಯಿತು.

ವಾಸ್ತವವಾಗಿ, ಬೆಕ್ಕುಗಳು ಇಲಿಗಳನ್ನು ತಿನ್ನುತ್ತವೆ ಮತ್ತು ಪ್ಲೇಗ್ ಇಲಿಗಳಿಂದ ಹರಡುತ್ತದೆ. ಹಾಗಾಗಿ ಬೆಕ್ಕುಗಳು ಇರುವ ಸ್ಥಳಗಳಿಗೆ ಹೋಗಲು ಜನ ಹೆದರಿ ಮುಂದಕ್ಕೆ ಹೋಗುತ್ತಿರಲಿಲ್ಲ.

ಆದರೆ ಈ ವೈಜ್ಞಾನಿಕ ಕಾರಣವು ಅಂತಿಮವಾಗಿ ಮೂಢನಂಬಿಕೆಯಾಗಿ ಮಾರ್ಪಟ್ಟಿತು. ಅಲ್ಲದೇ ಹಿಂದಿನ ಕಾಲದಲ್ಲಿ ವಿದ್ಯುತ್ ಇಲ್ಲದ ಕಾಲದಲ್ಲಿ ಯಾವುದಾದರೂ ಪ್ರಾಣಿಯನ್ನು ಹಾದು ಹೋಗುವಾಗ ಸ್ವಲ್ಪ ಹೊತ್ತು ನಿಲ್ಲುತ್ತಿದ್ದರು. ಇದರಿಂದ ಪ್ರಾಣಿ ಯಾರಿಗೂ ತೊಂದರೆಯಾಗದಂತೆ ಸುಲಭವಾಗಿ ರಸ್ತೆ ದಾಟುತ್ತಿತ್ತು. ಹೀಗಾಗಿ ಇದು ಮೂಢನಂಬಿಕೆಯಾಗಿ ಬದಲಾಗಿದೆ.


Spread the love

LEAVE A REPLY

Please enter your comment!
Please enter your name here