ತಲೆನೋವು ಜಾಸ್ತಿ ಇದ್ಯಾ? ಹಾಗಿದ್ರೆ ಕೂಡಲೇ ಹೀಗೆ ಮಾಡಿ, ದಿಢೀರ್ ಕಡಿಮೆ ಆಗುತ್ತೆ!

0
Spread the love

ಹೆಚ್ಚು ಕಡಿಮೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರು ಮತ್ತು ವಯಸ್ಸಾದವರು ಸಹ ಹಲವಾರು ಕಾಯಿಲೆಗಳನ್ನು ಮತ್ತು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇವುಗಳಲ್ಲಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ತಲೆ ನೋವು ಕೂಡ ಬಂದು. ಒಂದಲ್ಲ ಒಂದು ಸಮಯದಲ್ಲಿ ನೀವು ಅಷ್ಟೇ, ನಾವು ಅಷ್ಟೇ ತಲೆನೋವನ್ನು ಕಂಡಿರುತ್ತೇವೆ. ಆದರೆ ಇದಕ್ಕೆ ಮಾತ್ರೆನೇ ಪರಿಹಾರ ಅಂತ ಯಾಕೆ ಅಂದುಕೋಬೇಕು ಅಲ್ವಾ? ಇದಕ್ಕೆ ಕೆಲವೊಂದು ಟ್ರಿಕ್ಸ್ ಫಾಲೋ ಮಾಡಿ ಸಾಕು.

Advertisement

ಮಾತ್ರೆ ಸೇವಿಸಬೇಡಿ:

ತಲೆ ನೋವು ಬಂದಾಗ ಯಾವುದೇ ಕೆಲಸಗಳ ಮೇಲೆ ನಾವು ನಿಖರವಾಗಿ ಆಲೋಚಿಸಲು ಸಾಧ್ಯವಾಗುವುದಿಲ್ಲ. ತಲೆಯ ಭಾದೆ ನಮಗೆ ಅಷ್ಟರ ಮಟ್ಟಿಗೆ ತೊಂದರೆ ನೀಡಿರುತ್ತದೆ. ಆದರೆ ತಲೆ ನೋವು ಬಂದ ತಕ್ಷಣ ನಾವು ಅದಕ್ಕೆ ಸೂಕ್ತವಾದ ಮಾತ್ರೆ ಎಲ್ಲಿದೆ ಎಂದು ಮೊದಲು ಹುಡುಕುತ್ತೇವೆ. ಪ್ರತಿ ಬಾರಿ ಕೂಡ ಇದು ಸಾಧ್ಯವಿಲ್ಲ.
ತಲೆನೋವಿನ ಸಮಸ್ಯೆಗಳನ್ನು ಮತ್ತು ಅಡ್ಡಪರಿಣಾಮಗಳನ್ನು ಹೋಗಲಾಡಿಸಿಕೊಳ್ಳಲು ಮಾತ್ರೆಗಿಂತ ಅಧಿಕ ಶಕ್ತಿಶಾಲಿಯಾದ ಮನೆಮದ್ದುಗಳು ನಮ್ಮ ಬಳಿಯೇ ಇವೆ. ನಾವು ಅವುಗಳನ್ನು ಬಳಸಿಕೊಳ್ಳುವ ವಿಧಾನಗಳನ್ನು ತಿಳಿದುಕೊಳ್ಳಬೇಕು ಅಷ್ಟೇ.

ಮಸಾಜ್ ಮಾಡುವ ಪ್ರಕ್ರಿಯೆ:-

ಒಂದುವೇಳೆ ನಿಮಗೆ ತಲೆನೋವು ಹಣೆಯ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದರೆ, ನಿಮ್ಮ ಎರಡು ಕೈಗಳ ತೋರುಬೆರಳುಗಳನ್ನು ನಿಮ್ಮ ಮೂಗಿನ ಅಕ್ಕಪಕ್ಕ ಅಂದ್ರೆ ನಿಮ್ಮ ಕಣ್ಣುಗಳ ಪಕ್ಕದಲ್ಲಿ ಇಟ್ಟು ಮಸಾಜ್ ಮಾಡುತ್ತಾ ಬನ್ನಿ.

ಸ್ವಲ್ಪ ಒತ್ತಡ ಹಾಕಿ ವೃತ್ತಾಕಾರದಲ್ಲಿ ಮಸಾಜ್ ಮಾಡಲು ಮುಂದಾಗಿ. ಇದರಿಂದ ನಿಮ್ಮ ಹಣೆಯ ಭಾಗದಲ್ಲಿರುವ ಮಾಂಸ ಖಂಡಗಳು ಮತ್ತು ನರನಾಡಿಗಳು ಶಾಂತವಾಗಿ ತಲೆ ನೋವಿನ ಸಮಸ್ಯೆ ಮತ್ತು ಒತ್ತಡ ಕಡಿಮೆ ಆಗುತ್ತದೆ. ಒಂದು ವೇಳೆ ನಿಮಗೆ ವಿಪರೀತ ತಲೆನೋವು ಬಾಧೆ ಕೊಡುತ್ತಿದ್ದರೆ ನೆತ್ತಿಯ ಭಾಗದಲ್ಲಿ ಪೆಪ್ಪರ್ಮಿಂಟ್ ಅಥವಾ ಲವೆಂಡರ್ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿ. ನೀವು ಮಸಾಜ್ ಮಾಡುವುದರಿಂದ ತಲೆಯ ಭಾಗಕ್ಕೆ ಹೆಚ್ಚು ರಕ್ತ ಸಂಚಾರ ಉಂಟಾಗಿ ತಲೆ ನೋವು ಕಡಿಮೆಯಾಗುತ್ತದೆ.

ತಲೆನೋವಿಗೆ ಅತ್ಯುತ್ತಮ ಪರಿಹಾರಗಳು:-

ಆಯುರ್ವೇದ ಪದ್ಧತಿ ಹೇಳುವ ಪ್ರಕಾರ ಅತಿಯಾದ ದೈಹಿಕ ಉಷ್ಣಾಂಶ ಅಥವಾ ಪಿತ್ತದ ಪ್ರಭಾವ ತಲೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಮ್ಮ ದೇಹವನ್ನು ತಂಪು ಮಾಡಿಕೊಳ್ಳುವುದರಿಂದ ಅಥವಾ ಪಿತ್ತದ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುವ ವಿಧಾನಗಳಿಂದ ತಲೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಈ ಸಂದರ್ಭದಲ್ಲಿ ನೀವು ಮಜ್ಜಿಗೆ ಅಥವಾ ಎಳನೀರು ಕುಡಿಯುವುದು ಅಥವಾ ನಿಮ್ಮ ಬಳಿ ಹರಳೆಣ್ಣೆ ಇದ್ದರೆ ಅದನ್ನು ನೆತ್ತಿಯ ಭಾಗಕ್ಕೆ ಮತ್ತು ಪಾದಗಳ ಭಾಗಕ್ಕೆ ಹಚ್ಚುವುದರಿಂದ ತಲೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಸ್ವಲ್ಪ ಉಗುರುಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡುವ ಸಮಯದಲ್ಲಿ ತಲೆಯ ಭಾಗಕ್ಕೆ ಸೀಗೆಕಾಯಿ ಹಾಕಿ ಸ್ನಾನ ಮಾಡಬಹುದು. ಇದರ ಜೊತೆಗೆ ಗಸಗಸೆ ಅಥವಾ ತೆಂಗಿನಕಾಯಿ ಜೊತೆಗೆ ಸ್ವಲ್ಪ ತುಪ್ಪವನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಆಗಾಗ ತಿನ್ನುವ ಅಭ್ಯಾಸ ಮಾಡಿಕೊಂಡರೆ ನಿಮಗೆ ತಲೆ ನೋವು ಬರುವ ಸಮಸ್ಯೆ ಇರುವುದಿಲ್ಲ.

ಶುಂಠಿ ಚಹಾ ಸೇವನೆ ಮಾಡಬಹುದು:

ಆಯುರ್ವೇದ ಪದ್ಧತಿಯಲ್ಲಿ ತಲೆನೋವನ್ನು ಹೋಗಲಾಡಿಸುವ ಇನ್ನೊಂದು ವಿಧಾನ ಎಂದರೆ ಅದು ನಮ್ಮ ದೇಹದ ಜೀರ್ಣಶಕ್ತಿಯನ್ನು ಅಭಿವೃದ್ಧಿಪಡಿಸುವುದು. ಇದರಿಂದ ತಲೆನೋವು ಬರುವ ಸಾಧ್ಯತೆ ತಪ್ಪುತ್ತದೆ ಎಂದು ಹೇಳುತ್ತಾರೆ. ಇದಕ್ಕಾಗಿ ನಾವು ಶುಂಠಿಯನ್ನು ನಮ್ಮ ಆಹಾರ ಪದ್ಧತಿಯಲ್ಲಿ ಬಳಕೆ ಮಾಡಬೇಕು. ಶುಂಠಿಯಲ್ಲಿ ಕಂಡುಬರುವ ಕೆಲವೊಂದು ನೈಸರ್ಗಿಕ ಎಣ್ಣೆಯ ಅಂಶಗಳು ನಮ್ಮ ದೇಹದ ರಕ್ತ ಸಂಚಾರದ ಮೇಲೆ ಪ್ರಭಾವ ಉಂಟು ಮಾಡಿ ತಲೆನೋವಿನ ಪ್ರಭಾವವನ್ನು ಕಡಿಮೆ ಮಾಡುತ್ತದೆ.

ಹಾಗಾಗಿ ನೀವು ಶುಂಠಿಯಿಂದ ಚಹಾ ತಯಾರು ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ತಲೆನೋವಿನ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಒಳ್ಳೆಯ ಆಹಾರ ಪದ್ಧತಿ ನಿಮ್ಮದಾಗಲಿ:-

ಸಂಶೋಧನೆಗಳು ಹೇಳುವ ಹಾಗೆ ಕೆಲವೊಂದು ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ಉರಿಯೂತದ ಪ್ರಭಾವವನ್ನು ಉಂಟು ಮಾಡಿ ತಲೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಮೈಗ್ರೇನ್ ಸಮಸ್ಯೆ ಕೂಡ ಕಂಡುಬರಲು ಇದೇ ಕಾರಣ. ರಕ್ತ ಸಂಚಾರದಲ್ಲಿ ಈ ಅಂಶಗಳು ಬೆರೆತು ತಲೆನೋವಿಗೆ ಕಾರಣ ಆಗುತ್ತವೆ. ಹಾಗಾಗಿ ಯಾವ ಆಹಾರ ಪದಾರ್ಥಗಳನ್ನು ತಿಂದರೆ ನಿಮಗೆ ತಲೆನೋವು ಬರುತ್ತದೆ ಎಂಬುದನ್ನು ಮೊದಲು ತಿಳಿದುಕೊಂಡು ಅವುಗಳಿಂದ ಸಾಧ್ಯವಾದಷ್ಟು ದೂರವಿರಿ. ತಲೆನೋವನ್ನು ವಾಸಿ ಮಾಡುವಂತಹ ಕೆಲವೊಂದು ಆಹಾರಗಳನ್ನು ಆಗಾಗ ಹೆಚ್ಚಾಗಿ ಸೇವಿಸಿ.

ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳಿ:

ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತಸಂಚಾರ ದೇಹದ ಎಲ್ಲಾ ಭಾಗಗಳಿಗೆ ಸರಾಗವಾಗಿ ಪೂರೈಕೆಯಾಗುತ್ತದೆ. ಮುಖ್ಯವಾಗಿ ನಮ್ಮ ಕುತ್ತಿಗೆ ಭಾಗ, ನೆತ್ತಿಯ ಭಾಗ ಮತ್ತು ಕುತ್ತಿಗೆ ಭಾಗ ಗಳಿಗೆ ರಕ್ತಸಂಚಾರ ಉಂಟಾಗಿ ತಲೆ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ. ತಲೆನೋವು ಬಂದಂತಹ ಸಂದರ್ಭದಲ್ಲಿ ನಿಮ್ಮ ಕುತ್ತಿಗೆಯನ್ನು ಹಿಂದೆ ಮುಂದೆ ಮತ್ತು ಅಕ್ಕಪಕ್ಕ ಚೆನ್ನಾಗಿ ಆಡಿಸಿ. ಇದರಿಂದ ಹೃದಯದಿಂದ ತಲೆಯ ಭಾಗಕ್ಕೆ ಹರಡಿರುವ ರಕ್ತನಾಳಗಳಲ್ಲಿ ರಕ್ತಸಂಚಾರ ಉಂಟಾಗಿ ಮಾಂಸಖಂಡಗಳು ಶಾಂತ ಗೊಳ್ಳುತ್ತದೆ.
ತಲೆನೋವಿನ ಸಮಸ್ಯೆ ಪ್ರಭಾವ ಕಡಿಮೆಯಾಗುತ್ತದೆ. ವಿಶೇಷವಾಗಿ ತಲೆಯ ಹಿಂಭಾಗದಲ್ಲಿ ಹೆಚ್ಚು ನೋವು ಕಂಡುಬರುತ್ತಿದ್ದರೆ ಹೀಗೆ ಮಾಡಬಹುದು.

ಗ್ರೀನ್ ಟೀ ಸೇವನೆ ಮಾಡಿ:

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ತಲೆನೋವನ್ನು ದೂರವಿಡಬಹುದು. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿವೆ.
ಗ್ರೀನ್ ಟೀ ಕುಡಿಯುವ ಸಂದರ್ಭದಲ್ಲಿ ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಿಂಡಿಕೊಂಡು ಸ್ವಲ್ಪ ಬಿಸಿ ಇರುವಾಗ ಕುಡಿದರೆ ಸಾಕಷ್ಟು ಅನುಕೂಲಕಾರಿ. ಆದರೆ ಅತಿಯಾಗಿ ಗ್ರೀನ್ ಟೀ ಕುಡಿಯಲು ಹೋಗಬೇಡಿ. ಇದರಿಂದ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗಬಹುದು.


Spread the love

LEAVE A REPLY

Please enter your comment!
Please enter your name here