ಸಾಕಾಯ್ತಾ Love? ವಾರಕ್ಕೆ ಮುರಿದು ಬಿತ್ತು ಹಿಂದೂ ಯುವಕ, ಮುಸ್ಲಿಂ ಯುವತಿ ಪ್ರೇಮ ವಿವಾಹ! ಏನಾಯ್ತು?

0
Spread the love

ಚಿಕ್ಕಬಳ್ಳಾಪುರ:- ಪೋಷಕರ ವಿರೋಧದ ನಡುವೆಯೂ ಮದುವೆ ಆಗಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ ಪ್ರೇಮ ವಿವಾಹ ಜಸ್ಟ್ ಎರಡೇ ವಾರದಲ್ಲಿ ಮುರಿದು ಬಿದ್ದಿದೆ.

Advertisement

ತಾಲೂಕಿನ ಮೈಲಪನಹಳ್ಳಿ ಗ್ರಾಮದ ಫಸಿಯಾ ಹಾಗೂ ನಾಗಾರ್ಜುನ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ಇಬ್ಬರ ಮದ್ವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಜೋಡಿ ಮನೆಬಿಟ್ಟು ಹೋಗಿ ಪ್ರೇಮ ವಿವಾಹವಾಗಿತ್ತು. ಆದ್ರೆ, ಇದೀಗ 15 ದಿನದಲ್ಲೇ ಈ ಪ್ರೇಮ ವಿವಾಹ ಅಂತ್ಯಕಂಡಿದೆ.

ತಾಯಿಗೆ ಅನಾರೋಗ್ಯದ ಕಾರಣ ನೀಡಿ ಫಸಿಯಾ, ನಾಗಾರ್ಜುನನನ್ನು ಸಂಸಾರ ಎನ್ನುವ ಸಾಗರದ ನಡು ನೀರಿನಲ್ಲೇ ಬಿಟ್ಟು ತವರಿಗೆ ವಾಪಸ್​​ ಹೋಗಿದ್ದಾಳೆ. ಇದರಿಂದ ಫಸಿಯಾಳನ್ನು ನಂಬಿ ಹೋಗಿದ್ದ ನಾಗಾರ್ಜುನ ಈಗ ಕಂಗಾಲಾಗಿದ್ದಾನೆ.

ಯುವತಿ ಫಸಿಹಾ ತಾಯಿ ಮನೆ ಸೇರಿಕೊಂಡಿದ್ದಾಳೆ. ತಾಯಿಗೆ ಅನಾರೋಗ್ಯ ಇದೆ. ನನ್ನ ನೋವಲ್ಲೇ ಕೊರಗಿ ನೋವಿನಲ್ಲಿದ್ದಾರೆ ಎನ್ನುವ ಕಾರಣ ನೀಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು ತಾಯಿ ಮನೆ ವಾಪಸ್ ಹೋಗಿದ್ದಾಳೆ.


Spread the love

LEAVE A REPLY

Please enter your comment!
Please enter your name here