ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಬಹುದು. ಪಪ್ಪಾಯಿ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ, ಡಿ ಮತ್ತು ಇ ಮತ್ತು ಆಂಟಿಆಕ್ಸಿಡೆಂಟ್ ಗಳು, ಫಾಲೆವೊನಾಯ್ಡ್ ಗಳು, ಕ್ಯಾರೋಟಿನ್ ನಂತಹ ಪ್ರಮುಖ ಅಂಶಗಳು ಒಳಗೊಂಡಿವೆ. ಪಪ್ಪಾಯಿ ಎಲೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ ಎಂದು ಪರಿಗಣಿಸಲಾಗಿದೆ.
ಪಪ್ಪಾಯಿ ಎಲೆಗಳಲ್ಲಿ ಔಷಧೀಯ ಗುಣಗಳೂ ಸಮೃದ್ಧವೆಂದು ಪರಿಗಣಿಸಲಾಗಿದೆ. ಪಪ್ಪಾಯಿ ಎಲೆಗಳನ್ನು ಡೆಂಗ್ಯೂ ಆಗಿದ್ದಾಗ ಸಾಮಾನ್ಯವಾಗಿ ಬಳಸಲಾಗುತ್ತದೆ. ವಾಸ್ತವವಾಗಿ ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಪ್ಲೇಟ್ಲೆಟ್ ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಡೆಂಗ್ಯೂ ಜ್ವರಕ್ಕೆ ರಾಮಬಾಣ
ಡೆಂಗ್ಯೂ ಜ್ವರಕ್ಕೆ ನೈಸರ್ಗಿಕವಾದ ಮನೆಮದ್ದು ಮಾಡಬಹುದು. ಯಾಕೆಂದರೆ ಹೆಚ್ಚಿನ ಜ್ವರಗಳಿಗೆ ಹಿಂದಿನವರು ಗಿಡಮೂಲಿಕೆಗಳನ್ನು ಬಳಸಿಕೊಂಡು ಮನೆಮದ್ದು ಮಾಡುತ್ತಲಿದ್ದರು. ಇದರಲ್ಲಿ ಬೇವು, ತುಳಸಿ, ಅಲೋವೆರಾ, ಪುದೀನಾ ಇತ್ಯಾದಿಗಳು ಪರಿಣಾಮಕಾರಿಯಾಗಿ ಮೆನೆಮದ್ದಾಗಿ ಬಳಸಲ್ಪಡುತ್ತಿದೆ.
ಹೀಗೆ ಪಪ್ಪಾಯಿ ಎಲೆಗಳು ಕೂಡ ತುಂಬಾ ಪರಿಣಾಮಕಾರಿ ಆಗಿ ಡೆಂಗ್ಯೂ ಮತ್ತು ಮಲೇರಿಯಾವನ್ನು ತಡೆಯುವುದು. ಪಪ್ಪಾಯಿ ಎಲೆಯ ರಸವನ್ನು ಕುಡಿದರೆ ಅದರಿಂದ ಡೆಂಗ್ಯೂ ಕಡಿಮೆ ಮಾಡಬಹುದು ಎಂದು ಆಯುರ್ವೇದದಲ್ಲಿ ಕೂಡ ಹೇಳಲಾಗಿದೆ.
ಪಪ್ಪಾಯಿ ಎಲೆಯ ರಸವು ತುಂಬಾ ಕಹಿಯಾಗಿರುವುದು. ಆದರೆ ಇದು ಇದರಿಂದ ಹಲವಾರು ಲಾಭಗಳು ಇವೆ ಮತ್ತು ದೇಹದಲ್ಲಿ ಇದು ರಕ್ತಕಣವನ್ನು ಹೆಚ್ಚಿಸುವುದು ಎಂದು ಹೇಳಲಾಗುತ್ತದೆ.
ಪಪ್ಪಾಯಿ ಎಲೆಯ ರಸ ತಯಾರಿಸುವ ವಿಧಾನ
- ಪಪ್ಪಾಯಿ ಎಲೆಯ ರಸ ತೆಗೆಯಲು ಇಲ್ಲಿ ಹಂತ ಹಂತವಾದ ವಿವರಣೆಯಿದೆ.
- 10-15 ಚಿಗುರು ಪಪ್ಪಾಯಿ ಎಲೆ ತೆಗೆದುಕೊಂಡು ಸರಿಯಾಗಿ ತೊಳೆಯಿರಿ.
- ಇದನ್ನು ಈಗ ಜ್ಯೂಸರ್ ಗೆ ಹಾಕಿ ರಸ ತೆಗೆಯಿರಿ.
- ಈಗ ರಸವನ್ನು ಸೋಸಿಕೊಂಡು ಲೋಟಗೆ ಹಾಕಿ.
- ಹಾಗೆ ಪಪ್ಪಾಯಿ ಎಲೆಗಳನ್ನು ಜಜ್ಜಿಕೊಂಡು ರಸ ಹಿಂಡಿಕೊಳ್ಳಬಹುದು.
- ಇದನ್ನು ಹಾಗೆ ಕುಡಿಯಬಹುದು ಅಥವಾ ಫ್ರಿಡ್ಜ್ ನಲ್ಲಿಟ್ಟು ಕುಡಿಯಬಹುದು.
- ಇದಕ್ಕೆ ಸ್ವಲ್ಪ ರುಚಿ ಬರಲು ಕಪ್ಪು ಉಪ್ಪು, ಲಿಂಬೆರಸ ಮತ್ತು ಹುರಿದ ಜೀರಿಗೆ ಹಾಕಿ.
- ಪಪ್ಪಾಯಿ ಎಲೆ ರಸ ಕುಡಿದರೆ ಲಾಭಗಳು
- ಪಪ್ಪಾಯಿ ಎಲೆ ರಸವನ್ನು ನಿತ್ಯವೂ ಕುಡಿದರೆ ಅದರಿಂದ ಅದ್ಭುತವಾದ ಆರೋಗ್ಯ ಲಾಭಗಳು ಸಿಗುವುದು.



