ನಾವು ಬಳಸುವ ಕರ್ಪೂರ ಅಸಲಿಯೋ!? ನಕಲಿಯೋ!? ತಿಳಿಯುವುದು ಹೇಗೆ!?

0
Spread the love

ನಾವು ನಿತ್ಯ ಪೂಜೆ ಮಾಡುವಾಗ ಬಳಸುವ ಅಗತ್ಯ ವಸ್ತುಗಳಲ್ಲಿ ಕರ್ಪೂರ ಕೂಡ ಒಂದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದನ್ನ ಬಳಸುವುದರಿಂದ ಮನೆಯಲ್ಲಿ ಧನಾತ್ಮಕ ಭಾವ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

Advertisement

ದೇವರಿಗೆ ಆರತಿ ಮಾಡಲು ಕರ್ಪೂರ ಬೇಕೇ ಬೇಕು. ಆದರೆ ನಾವು ಬಳಸುವ ಕರ್ಪೂರ ಅಸಲಿಯೇ ನಕಲಿಯೇ ಎಂಬುದನ್ನು ತಿಳಿಯುವುದು ಹೇಗೆ ನೋಡಿ.

* ಬಣ್ಣದ ಆಧಾರದ ಮೇಲೆ ನಕಲಿ ಕರ್ಪೂರವನ್ನು ಗುರುತಿಸಬಹುದಾಗಿದೆ. ಸಾಮಾನ್ಯವಾಗಿ ನಕಲಿ ಕರ್ಪೂರ ಬಿಳಿಯಾಗಿರುವುದಿಲ್ಲ. ಸ್ವಲ್ಪ ತಿಳಿ ಕಂದು ಅಥವಾ ಸ್ವಲ್ಪ ಹಳದಿ ಹಸಿರು ಬಣ್ಣದಲ್ಲಿರುತ್ತದೆ.

* ಶುದ್ಧ ಕರ್ಪೂರವನ್ನು ಸುಟ್ಟ ನಂತರ ಯಾವುದೇ ಬೂದಿ ಉಳಿಯುವುದಿಲ್ಲ. ಒಂದು ವೇಳೆ ಕರ್ಪೂರವನ್ನು ಸುಟ್ಟ ಬಳಿಕವು ಬೂದಿ ಉಳಿದಿದ್ದರೆ ಅದು ಸಂಪೂರ್ಣವಾಗಿ ನಕಲಿಯಾಗಿದೆ ಎಂದರ್ಥ.

* ಶುದ್ಧ ಕರ್ಪೂರವು ಬೇಗನೇ ಕರಗುವುದಿಲ್ಲ. ಇದು ಉರಿಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ನೀವು ಹೊತ್ತಿಸಿದ ಕರ್ಪೂರವು ಬೇಗನೇ ಉರಿದು ಕರಗಿದರೆ ಅದು ಶುದ್ಧವಲ್ಲ ಎಂದು ಅರ್ಥೈಸಿಕೊಳ್ಳಬಹುದು.

* ಕಲಬೆರಕೆಯುಳ್ಳ ಕರ್ಪೂರವನ್ನು ಸುಡುವಾಗ ಜ್ವಾಲೆಯು ಸ್ವಲ್ಪ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಅದೇ ಶುದ್ಧ ಕರ್ಪೂರವನ್ನು ಸುಟ್ಟರೆ, ಅದು ಉತ್ತಮ ಪರಿಮಳದೊಂದಿಗೆ ಕಪ್ಪು ಹೊಗೆಯನ್ನು ಹೊರಸೂಸುತ್ತದೆ.

* ಶುದ್ಧ ಕರ್ಪೂರವನ್ನು ನೀರಿನಲ್ಲಿ ಹಾಕಿದರೆ ಅದು ತಳವನ್ನು ತಲುಪುತ್ತದೆ. ಏಕೆಂದರೆ ಶುದ್ಧ ಕರ್ಪೂರವು ಭಾರವಾಗಿರುತ್ತದೆ. ಆದರೆ ನಕಲಿ ಕರ್ಪೂರವು ನೀರಿನ ಮೇಲೆ ತೇಲುತ್ತದೆ.


Spread the love

LEAVE A REPLY

Please enter your comment!
Please enter your name here