ಹುಬ್ಬಳ್ಳಿ:- ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಬಿಜೆಪಿಗೆ ಮುಜುಗರ ಎಂಬ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಶಿಕ್ಷೆ ಆಗಿದೆ, ನಮಗೆ ಮುಜುಗರ ಯಾಕೆ ಆಗುತ್ತೆ? ಕಾಂಗ್ರೆಸ್‌ನವರು ಯಾವ ಯಾವ ಅಪರಾಧಿಗಳ ಜೊತೆ ಇದ್ರು ಗೊತ್ತಾ? ಖಲಿಸ್ತಾನಿ ಟೆರರಿಸ್ಟ್ ಜೊತೆ ರಾಹುಲ್ ಗಾಂಧಿ ಫೋಟೋ ಇದೆ. ಯಾಸಿನ್ ಮಲ್ಲಿಕ್ ಜೊತೆ ಇಲ್ಲಿರುವವರ ಫೋಟೋ ಇದೆ. ಅವರದ್ದು ಸಪ್ರೇಟ್ ಪಕ್ಷ, ನಮ್ಮದು ಅಲೈನ್ಸ್ ಆಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದೆ ಎಂದು ಹೇಳಿದರು.
ಇನ್ನೂ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಮಾಡಿದ್ದಾರೆ, ತನಿಖೆ ಆಗಲಿ. ಭಾರೀ ಅಪರಾಧ ಆಗಿದೆ ಅಂತ ಮೊದಲೇ ಬಿಂಬಿಸೋದು ಸರಿಯಲ್ಲ. ವೀರೇಂದ್ರ ಹೆಗಡೆ ಅವರು ತನಿಖೆ ಮಾಡಲಿ ಅಂತ ಅಂದಿದ್ದಾರೆ, ಎಸ್‌ಐಟಿ ನೀವೇ ಮಾಡಿದ್ದೀರಿ, ಯಾಕೆ ಅವಸರ ಮಾಡ್ತೀರಿ? ಅಂದು ಹೇಳಿದರು.