ಕಣ್ಣು ಉರಿ ಸಮಸ್ಯೆ ಹೆಚ್ಚಾಗಿ ಕಾಡ್ತಿದ್ಯಾ!? ಹಾಗಿದ್ರೆ ಈ ಸರಳ ಟಿಪ್ಸ್ ಫಾಲೋ ಮಾಡಿ!

0
Spread the love

ನಮ್ಮ ದೇಹದಲ್ಲಿ ತುಂಬಾ ಸೂಕ್ಷ್ಮವಾದ ಮತ್ತು ಅತಿ ಹೆಚ್ಚು ಉಪಯೋಗಕ್ಕೆ ಬರುವ ಅಂಗಗಳು ಎಂದರೆ ಅದು ನಮ್ಮ ಕಣ್ಣುಗಳು. ಕಣ್ಣುಗಳಲ್ಲಿ ಕಿರಿಕಿರಿ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಕಣ್ಣುಗಳಲ್ಲಿನ ಕಿರಿಕಿರಿಯಿಂದ ಕಣ್ಣುಗಳು ಕೆಂಪಾಗುತ್ತವೆ. ಈ ರೀತಿ ಆಗಲು ಹಲವು ಕಾರಣಗಳಿವೆ.

Advertisement

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ ನೋಡುವುದರಿಂದ ಕಣ್ಣು ಉರಿ ಅಥವಾ ಕಣ್ಣು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇದಕ್ಕೆ ಒಂದು ಕಾರಣ ಕಣ್ಣಿನ ಮೇಲೆ ಬೀಳುವ ಒತ್ತಡವಾದರೆ, ಮತ್ತೊಂದು ಕಾರಣ ಗೆಜೆಟ್​ಗಳಿಂದ ಹೊರಸೂಸುವ ಬೆಳಕು. ಆದರೆ ಆಗೊಮ್ಮೆ ಹೀಗೊಮ್ಮೆ ಕಾಣಿಸಿಕೊಳ್ಳುವ ಇಂತಹ ಸಮಸ್ಯೆಗೆ ಸಿಂಪಲ್ ಆಗಿ ಪರಿಹಾರ ಕಂಡುಕೊಳ್ಳಬಹುದು.

ಸಾಮಾನ್ಯವಾಗಿ ಕಣ್ಣಿನ ನೋವಿನ ಸಮಸ್ಯೆ ಕಾಡುತ್ತಿದ್ದರೆ ರೋಸ್ ವಾಟರ್ ಮೂಲಕ ಪರಿಹಾರ ಕಾಣಬಹುದು. ಇದಕ್ಕಾಗಿ ನೀವು ರಾತ್ರಿ ಮಲಗುವ ವೇಳೆ ಕಣ್ಣಿನ ಮೇಲ್ಭಾಗದಲ್ಲಿ ರೋಸ್ ವಾಟರ್ ಸವರಬೇಕು. ಅಥವಾ ರೋಸ್ ವಾಟರ್ ಮಿಶ್ರಿತ ನೀರಿನಿಂದ ಕಣ್ಣುಗಳನ್ನು ತೊಳೆದು ಮಲಗಬಹುದು. ಹೀಗೆ ಮಾಡುವುದರಿಂದ ಕಣ್ಣು ಉರಿ ಅಥವಾ ಕಣ್ಣು ನೋವು ಕಡಿಮೆಯಾಗುತ್ತದೆ.

ಇನ್ನು ಎಲ್ಲರಿಗೂ ಗೊತ್ತಿರುವ ಹಾಗೆ ಸೌತೆಕಾಯಿ ಕಣ್ಣು ಉರಿಗೆ ಉತ್ತಮ ಮನೆಮದ್ದು. ಸೌತೆಕಾಯಿಯನ್ನು ರೌಂಡ್ ಆಗಿ ತುಂಡರಿಸಿ, ಕೆಲವೊತ್ತು ಫ್ರಿಡ್ಜ್​ನಲ್ಲಿಡಿ. ಬಳಿಕ ಅದನ್ನು ಕಣ್ಣು ಮುಚ್ಚಿ ಕಣ್ಣಿನ ಮೇಲೆ ಇರಿಸಿ. ಹೀಗೆ ಪ್ರತಿನಿತ್ಯ 15 ರಿಂದ 30 ನಿಮಿಷ ಮಾಡಿದರೆ ಕಣ್ಣು ಉರಿ ಸಮಸ್ಯೆ ದೂರವಾಗುತ್ತದೆ.

ಸೌತೆಕಾಯಿಯಂತೆ ಆಲೂಗಡ್ಡೆ ತುಂಡನ್ನು ಕಣ್ಣುಗಳ ಮೇಲಿಟ್ಟು ವಿಶ್ರಾಂತಿ ಪಡೆಯುವುದರಿಂದ ಉರಿ ಕಡಿಮೆಯಾಗುತ್ತದೆ. ಇದಲ್ಲದೆ ಆಲೂಗಡ್ಡೆ ರಸವನ್ನು ಕಣ್ಣಿಗೆ ಹಚ್ಚಿಕೊಳ್ಳುವ ಮೂಲಕ ಕೂಡ ಪರಿಹಾರ ಕಾಣಬಹುದು.

ದಾಳಿಂಬೆ ಹಣ್ಣಿನಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಹಾಗೆಯೇ ಅದರ ಎಲೆಗಳ ಮೂಲಕ ಕೂಡ ಕಣ್ಣಿನ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ. ಇದಕ್ಕಾಗಿ ನೀವು ದಾಳಿಂಬೆ ಗಿಡದ ಎಲೆಗಳನ್ನು ಪುಡಿ ಮಾಡಿ ನೀರು ಬೆರೆಸಿ ಪೇಸ್ಟ್​ನಂತೆ ಮಾಡಿ. ಬಳಿಕ ಅದನ್ನು ಕಣ್ಣುಗಳ ಮೇಲೆ ಹಚ್ಚಿಕೊಳ್ಳಿ. ಇದನ್ನು10 ರಿಂದ 20 ನಿಮಿಷಗಳ ಬಳಿಕ ತೊಳೆಯಿರಿ.

ಹಾಲುಗಳ ಮೂಲಕ ಕೂಡ ಕಣ್ಣಿನ ಉರಿಯನ್ನು ಕಡಿಮೆ ಮಾಡಬಹುದು. ತಣ್ಣನೆಯ ಹಾಲನ್ನು ಒಂದು ಕಾಟನ್ ಬಟ್ಟೆಯಲ್ಲಿ ಅದ್ದಿ, ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಅಥವಾ ಹಾಲಿನಿಂದ ಕಣ್ಣುಗಳ ಭಾಗದಲ್ಲಿ ಮಸಾಜ್ ಮಾಡಿ. ದಿನನಿತ್ಯ ಹೀಗೆ ಮಾಡುವುದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಣ್ಣು ಉರಿ ಕಡಿಮೆಯಾಗುತ್ತದೆ.


Spread the love

LEAVE A REPLY

Please enter your comment!
Please enter your name here