ವಡೋದರಾ:- ಮಹಿಳೆಯೊಬ್ಬರು ಪಾನಿಪುರಿ ಮೇಲಿನ ಅತಿಯಾದ ಪ್ರೀತಿಯಿಂದ ಟ್ರಾಫಿಕ್ ಜಾಮ್ ಮಾಡಿರುವ ವಿಚಿತ್ರ ಘಟನೆ ಗುಜರಾತ್ನ ವಡೋದರಾದಲ್ಲಿ ಜರುಗಿದೆ.
Advertisement
ಎಸ್, ಸಾಮಾನ್ಯವಾಗಿ ಹುಡುಗಿಯರಿಗೆ ಪಾನಿಪುರಿ ಅಂದ್ರೆ ಎಲ್ಲಿಲ್ಲದ ಮೋಹ. ಅವರು ಎಷ್ಟೇ ಸಿಟ್ಟು ಮಾಡಿಕೊಂಡಿದ್ದರು ಪಾನಿಪುರಿ ಕೊಡ್ಸಿದ್ರೆ ಅವರ ಸಿಟ್ಟೆಲ್ಲಾ ದೂರ ಆಗುತ್ತೆ.. ಅಷ್ಟೊಂದು ಪ್ರೀತಿ ಪಾನಿಪುರಿ ಮೇಲೆ. ಮಹಿಳೆಯೊಬ್ಬರು 20 ರೂ.ಗೆ 6 ಪಾನಿ ಪುರಿ ನೀಡುವ ಬದಲು ಕೇವಲ 4 ಪಾನಿ ಪುರಿಗಳನ್ನು ನೀಡಿದ್ದಕ್ಕಾಗಿ ಬೇಸರಗೊಂಡು, ತಮಗೆ 2 ಪಾನಿಪುರಿ ಬೇಕೇಬೇಕೆಂದು ವಾಹನಗಳ ಮಧ್ಯೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ವಡೋದರಾದ ರಸ್ತೆಯ ಮಧ್ಯದಲ್ಲಿ ಕುಳಿತು ಪಾನಿ ಪುರಿ ಮಾರಾಟಗಾರನ ವಿರುದ್ಧ ಪ್ರತಿಭಟಿಸುತ್ತಿರುವ ಅವರ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಕೊನೆಗೆ ಪೊಲೀಸರು ಬಂದು ಆಕೆಯನ್ನು ರಸ್ತೆಯಿಂದ ಎಬ್ಬಿಸಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.