ತುಮಕೂರು:- ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್ ಧಾಮದ ಮೇಲೆ ಮಂಗಳವಾರ ಉಗ್ರರ ಭೀಕರ ಗುಂಡಿನ ದಾಳಿ ನಡೆದಿದೆ. ಧಾಮವನ್ನು ಪ್ರವೇಶಿಸಿದ್ದ ಬಂದೂಕುಧಾರಿಗಳು ಅಲ್ಲಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸಾಕಷ್ಟು ಮಂದಿ ಉಸಿರು ಚಲ್ಲಿದ್ದಾರೆ.
ಕಾಶ್ಮೀರದಲ್ಲಿ ನಡೆದ ಈ ಉಗ್ರರ ದಾಳಿಯಿಂದ ಇಡೀ ದೇಶವೇ ಮರುಗುತ್ತಿದ್ದರೆ, ಇಲ್ಲಿನ ಇನ್ಸ್ಪೆಕ್ಟರ್ ಮಾತ್ರ ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿದ್ದಾರೆ. ಹೌದು, ಜಮ್ಮು ಕಾಶ್ಮೀರದಲ್ಲಿನ ಉಗ್ರರ ದಾಳಿಗೆ ಒಂದೆಡೆ ಇಡೀ ದೇಶವೇ ಮರುಕ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ-ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡು ಎಷ್ಟೋ ಕುಟುಂಬಗಳು ದುಖಃದಲ್ಲಿ ಮುಳುಗಿದೆ. ಆದರೆ ಈ ಪೋಲೀಸಪ್ಪ ಮಾತ್ರ ಅದೆಲ್ಲ ಮರೆತು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಎಸ್, ತುಮಕೂರು ಸಿಪಿಐ ಬಿ.ಎಸ್.ದಿನೇಶ್ ಕುಮಾರ್ ಅವರಿಂದ ಈ ಸಂಭ್ರಮಾಚರಣೆ ನಡೆದಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ತುಮಕೂರಿನಿಂದ ಕುಶಾಲನಗರಕ್ಕೆ ದಿನೇಶ್ ಕುಮಾರ್ ವರ್ಗಾವಣೆ ಆಗಿದ್ದರು. ಹೀಗಾಗಿ ಅವರಿಗೆ ಕ್ರೇನ್ ನಲ್ಲಿ ಹಾರ ಹಾಕಿ ಬೀಳ್ಕೊಡುಗೆ ಕೊಡಲಾಗಿದೆ. ತೆರದ ಜೀಪ್ ನಲ್ಲಿ ರ್ಯಾಲಿ ಮಾಡಿ ಶೋ ಮಾಡಲಾಗಿದ್ದು, ಪೊಲೀಸರ ಈ ನಡೆಗೆ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.