ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ರಾಜೀವ ಗಾಂಧಿ ನಗರದ ಈಶ್ವರ ಬಡಾವಣೆಯ ಶ್ರೀ ಈಶ್ವರ ಸಮುದಾಯ ಭವನ ಹಾಗೂ ಶ್ರೀ ಈಶ್ವರ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ ಮತ್ತು ಕೋಡಿಕೊಪ್ಪದ ಹಠಯೋಗಿ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪ್ರವಚನ ಸಮಾರೋಪ ಸಮಾರಂಭ ಆ. 24ರಂದು ಮುಂಜಾನೆ 11 ಗಂಟೆಗೆ ಜರುಗಲಿದೆ.
ಗದಗ-ಬೆಟಗೇರಿ ನಗರಸಭೆ ಹಾಗೂ ಶ್ರೀ ಈಶ್ವರ ಸೇವಾ ಟ್ರಸ್ಟ್ ನಿಂದ ಜರುಗುವ ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಣ್ಣಿಗೇರಿ ದಾಸೋಹಮಠದ ಪೂಜ್ಯ ಸದ್ಗುರು ಡಾ. ಶಿವಕುಮಾರ ಮಹಾಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ನಗರಸಭೆಯ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ವಹಿಸುವರು.
ಮುಖ್ಯ ಅತಿಥಿಗಳಾಗಿ ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್. ದುರಗೇಶ, ಪೌರಾಯುಕ್ತ ರಾಜಾರಾಮ ಪವಾರ, ಸ.ಕಾ.ಅ ಎಚ್.ಎ. ಬಂಡಿವಡ್ಡರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಆಗಮಿಸುವರು.
ಕರ್ನಾಟಕ ವಾಣಿಜ್ಯರತ್ನ ಪ್ರಶಸ್ತಿ ಪುರಸ್ಕೃತರಾದ ಶರಣಬಸಪ್ಪ ಗುಡಿಮನಿ, ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕೃತರಾದ ಚಂದ್ರು ಬಾಳಿಹಳ್ಳಿಮಠ, ಗಣ್ಯರಾದ ರಮೇಶ ದಿನ್ನಿ, ಎಚ್.ಎನ್. ಚಿಗರಿ, ಸುಮಿತ್ರಾ ಭಜಂತ್ರಿ, ಕೆ.ಎಚ್. ಚಟ್ಟಿ, ಈರಣ್ಣ ಮುದಗಲ್ಲ ಅವರಿಗೆ ಸನ್ಮಾನವಿದೆ. ಇದೇ ಸಂದರ್ಭದಲ್ಲಿ ಸಾಧಕರಿಗೆ, ದಾನಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಗುವದು. ಪ್ರಸಾದ ಭಕ್ತಿ ಸೇವೆಯನ್ನು ಎಸ್.ಆರ್. ಅಂಗಡಿ ವಹಿಸಿಕೊಂಡಿದ್ದಾರೆ ಎಂದು ಕಾರ್ಯದರ್ಶಿ ಕೆ.ಬಿ. ಕಂಬಳಿ ತಿಳಿಸಿದ್ದಾರೆ.
ಟ್ರಸ್ಟ್ನ ಗೌರವ ಅಧ್ಯಕ್ಷ ಚನ್ನಬಸಪ್ಪ ಅಕ್ಕಿ, ಅಧ್ಯಕ್ಷ ಎಂ.ಜಿ. ಸಂತೋಜಿ, ಕಾರ್ಯದರ್ಶಿ ಕೆ.ಬಿ. ಕಂಬಳಿ, ಸಂಘಟನಾ ಕಾರ್ಯದರ್ಶಿ ಚನ್ನಮ್ಮ ಸಂಶಿ ಉಪಸ್ಥಿತರಿರುವರು. ಪ್ರವಚನಕಾರರಾದ ಮುಖ್ಯೋಪಾಧ್ಯಾಯ ಎಸ್.ಬಿ. ದೊಡ್ಡಣ್ಣವರ 13ನೇ ವರ್ಷದ ಶ್ರಾವಣ ಮಾಸದ ಪ್ರವಚನ ಸಂಪನ್ನಗೊಳಿಸುವರು. ರತ್ನಾ ಮಂಟೂರಮಠ, ಮೋಹನ ಮೇರವಾಡೆ ಹಾಗೂ ಶಿವಶಂಕರ ದೊಡ್ಡಮನಿ ಅವರಿಂದ ಸಂಗೀತವಿದೆ.