ಇಸ್ರೋ ಆನ್‌ಲೈನ್ ತರಬೇತಿ ಕಾರ್ಯಕ್ರಮ

0
ISRO Online Training Programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯವು ಡೆಹರಾಡೂನಿನ ಇಂಡಿಯನ್ ಇಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್, ಇಸ್ರೋ ನಡೆಸಿದ ಆನ್‌ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾಗವಹಿಸುವಿಕೆ ಪತ್ರವನ್ನು ಪಡೆದುಕೊಂಡಿದೆ.

Advertisement

ತರಬೇತಿಯ ವಿಷಯ `ಸೌರವ್ಯೂಹದ ಪರಿಶೋಧನೆ’ ಎಂಬುದಾಗಿದ್ದು, ಒಟ್ಟು 15 ವಿದ್ಯಾರ್ಥಿಗಳು ಕೋರ್ಸ್ಗೆ ಹೆಸರು ನೋಂದಾಯಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಓಂಕಾರ್, ಮಂಜುನಾಥ, ಪ್ರಜ್ವಲ್ ಗಂದೋಲೆ, ಸಯ್ಯದಬಾಷಾ ಲಕ್ಷ್ಮೇಶ್ವರ, ಸುಷ್ಮಾ, ಶಾಲು, ಸುರಯ್ಯಬಾನು ಮುಲ್ಲಾ, ವಿನಾಯಕ ಶಿಗ್ಗಾವಿ, ವಿನಯಕುಮಾರ ಪ್ರಮಾಣಪತ್ರದೊಂದಿಗೆ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡರು.

ನಂತರ ನಡೆದ ಪರೀಕ್ಷೆಯಲ್ಲಿ ಮೆಕ್ಯಾನಿಕಲ್ ವಿಭಾಗದ ಮೂವರು ವಿದ್ಯಾರ್ಥಿಗಳು ಮತ್ತು ಎಲೆಕ್ಟ್ರಾನಿಕ್ಸ್-ಕಮ್ಯುನಿಕೇಶನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ವಿನಯಕುಮಾರ, ಸುಷ್ಮಾ, ಸಯ್ಯದಬಾಷಾ ಲಕ್ಷ್ಮೇಶ್ವರ, ಪ್ರಜ್ವಲ್ ಗಂದೋಲೆ ಮೆರಿಟ್ ಪ್ರಮಾಣಪತ್ರವನ್ನು ಪಡೆದುಕೊಂಡದ್ದಾರೆ ಎಂದು ಕಾರ್ಯಕ್ರಮದ ಸಂಯೋಜಕರಾದ ಮೆಕ್ಯಾನಿಕಲ್ ವಿಭಾಗದ ಪ್ರೊ. ಅರುಣ್ ಎ.ಶಿವಶಿಂಪಿ ದೃಢಪಡಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ. ಎಂ.ಎಂ. ಅವಟಿ, ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕವರ್ಗದವರು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here