ಬೀದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತಾ ಲೈಸನ್ಸ್ ವಿತರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದ ಬೀದಿ ವ್ಯಾಪಾರಿಗಳಿಗೆ ನಗರಸಭೆ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಗದಗ ನಗರ ತಿಲಕ್ ಪಾರ್ಕ್ ಹತ್ತಿರ ಐ.ಎಸ್.ಇ ಹಾಗೂ ಆಹಾರ ಸುರಕ್ಷತಾ ಲೈಸನ್ಸ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಮಕ್ತುಂಸಾಬ ನಾಲಬಂದ ವಹಿಸಿಕೊಂಡಿದ್ದರು. ಕೃಷ್ಣಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಆಹಾರ ಸುರಕ್ಷತಾ ನೋಡ್‌ಲ್ ಅಧಿಕಾರಿ ವಿವೇಕ ತ್ರಿಮಲ್ಲೇ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಬಸರಾಜ ಮಲ್ಲೂರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ವಿ. ಸಂತೋಷ, ಎಸ್.ಬಿ.ಐ ಬ್ಯಾಂಕಿನ ಶಿವಾನಂದ ಪೊಶೆಟ್ಟಿ, ನಗರಸಭೆ ಪೌರಾಯುಕ್ತರು, ಸಮುದಾಯ ಸಂಘಟನಾಧಿಕಾರಿ ಶ್ರೀಶೈಲಗೌಡ ಸಂಕನಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಖ್ತರ್‌ಸಾಬ ಬಬರ್ಚಿ ಪಾಲ್ಗೊಂಡಿದ್ದರು.

ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ರಮೇಶ ಮುಳಗುಂದ, ಅನ್ವರ್ ಶಿರಹಟ್ಟಿ, ಮಂಜುನಾಥ, ಮಾರುತಿ ಸೋಳಂಕಿ, ತಬರೇಜ ಪಠಾಣ್, ರಾಜಾಖಾನ ಪಠಾಣ್, ಸಿ.ಎಲ್.ಎಫ್ ಅಧ್ಯಕ್ಷರಾದ ಅಶ್ವಿನಿ ಬಳ್ಳಾರಿ, ರಶಿದಾ ನದಾಫ್, ಫಾತೀಮಾ ಧಾರವಾಡ, ರಜೀಯಾ ಹತ್ತಿವಾಲೆ, ಬಾಷಾಸಾಬ ಮಲ್ಲಸಮುದ್ರ, ನಗರ ಸಮಿತಿ ಅಧ್ಯಕ್ಷ ಜಹಾಂಗೀರ ಮುಳಗುಂದ, ಫಯಾಜ್ ನಾರಾಯಣಕೇರಿ, ರಾಮವ್ವ ಲಮಾಣಿ, ಕುತೇಜಾ ದೊಡ್ಡಮನಿ ಉಪಸ್ಥಿತರಿದ್ದರು. ನಿಂಗನಗೌಡ ಮಾಲಿಪಾಟೀಲ ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here