ಕಲಬುರಗಿ: ಟಿಕೆಟ್ ದರ ಹೆಚ್ಚಿಸುವ ಮೂಲಕ ಈ ಸರ್ಕಾರ ದಿವಾಳಿಯೆದ್ದಿದೆ ಅನ್ನೋದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆ ಆಗೋದು ನಿರಂತರ ಪ್ರಕ್ರಿಯೆ, ಆದ್ರೆ ಬಸ್ ಟಿಕೆಟ್ ದರ ಹೆಚ್ಚಿಸುವ ಮೂಲಕ ಈ ಸರ್ಕಾರ ದಿವಾಳಿಯೆದ್ದಿದೆ ಅನ್ನೋದು ಸಾಬೀತಾಗಿದೆ ಎಂದರು. ಇನ್ನೂ ಸರ್ಕಾರೀ ನೌಕರರ ಸಂಬಳ ಸಹ 4 ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕಾಗುತ್ತದೆ, ಸಾರಿಗೆ ಸಚಿವನಾಗಿದ್ದಾಗ ತಾನು ನೌಕರರ ಸಂಬಳ ಹೆಚ್ಚಿಸಿದ್ದಾಗಿ ಹೇಳಿದರು.
ಕೋವಿಡ್ ಸಮಯದಲ್ಲಿ ತಮ್ಮ ಸರ್ಕಾರ ಅಧಿಕಾರದಲ್ಲಿತ್ತು ಮತ್ತು ತೆರಿಗೆ ಸಂಗ್ರಹ ಪಾತಾಳಕ್ಕಿಳಿದಿತ್ತು, ಆದಾಗ್ಯೂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡಿತ್ತು, ಮತ್ತು ಕಂದಾಯ ಸಚಿವನಾಗಿದ್ದ ತಾನು ಸ್ಟ್ಯಾಂಪ್ ಡ್ಯೂಟಿಯನ್ನು ಶೇಕಡ 5ರಷ್ಟು ಕಡಿಮೆ ಮಾಡಿದ್ದೆ ಎಂದು ತಿಳಿಸಿದರು.