ಬೆಂಗಳೂರು: MLA ಗಳ ಮುಂದೆ ಹೋಗಿ ಪೆನ್ ಕೊಡಿ ಎಂದು ಡಿಕೆಶಿ ಅಂಗಲಾಚೋ ಸ್ಥಿತಿ ಬಂದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿಕೆಶಿ ಚುನಾವಣೆ ಸಮಯದಲ್ಲಿ ನನ್ನ ಕೈಗೆ ಪೆನ್ನು ಕೊಡಿ ಎಂದು ಹೇಳುತ್ತಿದ್ದರು. ಈಗ MLA ಗಳ ಮುಂದೆ ಹೋಗಿ ಪೆನ್ ಕೊಡಿ ಎಂದು ಡಿಕೆಶಿ ಅಂಗಲಾಚೋ ಸ್ಥಿತಿ ಬಂದಿದೆ.
ಇದನ್ನ ನೋಡಿದ್ರೆ ಅವರ ಬಗ್ಗೆ ಕರುಣೆ ಬರುತ್ತಿದೆ. ಡಿಕೆಶಿಗೆ ಧೈರ್ಯ ಇದ್ದರೆ ಪವರ್ ಶೇರಿಂಗ್ ಮಾತುಕತೆ ವೇಳೆ ಯಾರು ಇದ್ದರು ಎಂದು ಹೇಳಲಿ. ಕಾಂಗ್ರೆಸ್‌ನಲ್ಲಿ ಕತ್ತಲಲ್ಲಿ ಕರಡಿ ಹುಡುಕೋ ಕೆಲಸ ಆಗುತ್ತಿದೆ. ಡಿಕೆಶಿ ಏರಿಯಾದಲ್ಲಿ ಕರಡಿ ಜಾಸ್ತಿ ಇವೆ. ಹೀಗಾಗಿ ಸ್ಪಷ್ಟವಾಗಿ ಮಾತುಕತೆ ಆಗಿದ್ರೆ ಧೈರ್ಯವಾಗಿ ಹೇಳಿ ಎಂದಿದ್ದಾರೆ.
ಸಚಿವ ರಾಜಣ್ಣ, ಪರಮೇಶ್ವರ್ ಎಲ್ಲರೂ ಡಿಕೆಶಿ ವಿರುದ್ದ ಮಾತಾಡ್ತಿದ್ದಾರೆ. ಮಾಗಡಿ ಬಾಲಕೃಷ್ಣ, ಶಾಸಕ ಶಿವಗಂಗಾ ಡಿಕೆಶಿ ಸಿಎಂ ಎಂದು ಘೋಷಣೆ ಮಾಡಿದ್ದಾರೆ. ಡಿಕೆಶಿಗೆ ಬೆಳೆಯೂ ಇಲ್ಲ. ಬೆಳೆ ಪರಿಹಾರವೂ ಇಲ್ಲದಂತೆ ಆಗಿದೆ. ಜನರ ಮುಂದೆ ಇವರು ಹೇಳಿದ್ದು ಏನು? ಒಳ್ಳೆಯ ಸರ್ಕಾರ ಕೊಡ್ತೀನಿ ಎಂದು ಹೇಳಿ ಅಭದ್ರ ಸರ್ಕಾರ ಕೊಟ್ಟಿದ್ದಾರೆ. ನಿತ್ಯ ಕುರ್ಚಿ ಕಿತ್ತಾಟ ನೋಡ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.