ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತವೆ ಅನ್ನೋ ಮಾತು ಈ ಮೊದಲಿನಿಂದಲೂ ಕೇಳಿ ಬಂದಿದೆ. ಅದಕ್ಕೆ ತಕ್ಕಂತೆ ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಹಲವರ ಅದೃಷ್ಟ ಬದಲಾಗಿದೆ. ಆದ್ರೆ ಈ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಧರ್ಮ ಕೀರ್ತಿ ರಾಜ್ ಮಾತನಾಡಿದ್ದಾರೆ.
ಖಾಸಗಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಧರ್ಮ ಕೀರ್ತಿರಾಜ್, ಬಿಗ್ ಬಾಸ್ ಮನೆಯಲ್ಲಿ ಧರ್ಮ ಅವರು ಏನೇ ಇದ್ದರೂ ಓಪನ್ ಆಗಿ ಮಾತನಾಡುತ್ತಾ ಇದ್ದರು. ಅವರ ಹಿನ್ನಡೆಗೆ ಇದು ಕೂಡ ಕಾರಣ ಆಯಿತು ಎನ್ನಬಹುದು. ಹೊರ ಬಂದ ಬಳಿಕವೂ ಅವರು ಮುಕ್ತವಾಗಿ ಮಾತನಾಡೋದನ್ನು ಮುಂದುವರಿಸಿದ್ದಾರೆ.
‘ಬಿಗ್ ಬಾಸ್ನಿಂದ ಸಿನಿಮಾ ಆಫರ್ಗಳು ಬರುತ್ತವೆ ಅನ್ನೋದು ತಪ್ಪು. ಸಿನಿಮಾನೇ ಬೇರೆ, ಇದೇ ಬೇರೆ’ ಎಂದು ಧರ್ಮ ಅವರು ಹೇಳಿಕೊಂಡಿದ್ದಾರೆ. ಅವರು ಹೇಳಿರುವ ವಿಚಾರವನ್ನು ಅನೇಕರು ಒಪ್ಪಿಕೊಂಡಿದ್ದರೆ ಮತ್ತೊಂದಷ್ಟು ಮಂದಿ ನಿರಾಕರಿಸಿದ್ದಾರೆ.
‘ಅವನು ಕೀರ್ತಿರಾಜ್ ಮಗ, ಅವನಿಗೆ ಧಿಮಾಕು ಎಂದೆಲ್ಲ ಜನರು ನನ್ನ ಬಗ್ಗೆ ಅಂದುಕೊಂಡಿದ್ದಿರಬಹುದು. ಆದರೆ, ಬಿಗ್ ಬಾಸ್ಗೆ ಹೋಗಿ ನಾನು ಯಾರು ಅನ್ನೋದು ಗೊತ್ತಾಗಿದೆ. ಜನರ ಜೊತೆ ರೀಕನೆಕ್ಟ್ ಆದೆ. ಒಳ್ಳೆಯ ಸಿನಿಮಾ ಕೊಟ್ಟರೆ ಜನರು ನನ್ನ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಬಂದಿದೆ’ ಎಂದು ಧರ್ಮ ಕೀರ್ತಿ ರಾಜ್ ಹೇಳಿದ್ದಾರೆ.