ರಾಜ್ಯದ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ!

0
Spread the love

ಬೆಂಗಳೂರು:- ರಾಜ್ಯದ ಶಾಲಾಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನವನ್ನು ರಕ್ಷಿಸುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ. ಸಂವಿಧಾನದಲ್ಲಿ ಈಗಾಗಲೇ 106 ತಿದ್ದುಪಡಿಗಳಾಗಿದ್ದು, ವಿಶ್ವದಲ್ಲಿ ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವುದು ಭಾರತದ ಸಂವಿಧಾನ ಎಂಬ ಹೆಮ್ಮೆ ನಮ್ಮದು ಎಂದರು.

ಭಾರತದ ಸಂವಿಧಾನ ಅಂಗೀಕರಣಗೊಂಡ 75 ನೇ ವಾರ್ಷಿಕೋತ್ಸವವನ್ನು ಸಂವಿಧಾನ ದಿನ ಎಂದು ಆಚರಿಸುತ್ತೇವೆ. ಕೇಂದ್ರ , ರಾಜ್ಯ ಸರ್ಕಾರಗಳು ಹಾಗೂ ಎಲ್ಲ ಸ್ಥಳೀಯ ಸಂಸ್ಥೆಗಳು ಸಂವಿಧಾನದಂತೆ ನಡೆದು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಂತೆ ಕೆಲಸ ಮಾಡಬೇಕು.

ಆದ್ದರಿಂದ ರಾಜ್ಯದ ಎಲ್ಲಾ ಶಾಲಾಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ಕಡ್ಡಾಯವಾಗಿ ಓದಿ, ಅದರ ಆಶಯಗಳನ್ನು ವಿದ್ಯಾರ್ಥಿಗಳು ಮನನ ಮಾಡಿಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ರಾಜಕೀಯದ ಮತ್ತು ಸರ್ಕಾರದ ಸಿದ್ಧಾಂತವೂ ಹೌದು. ಈ ಆಶಯಗಳೊಂದಿಗೆ ಸಾಗುತ್ತಿರುವ ನಮ್ಮ ಸರ್ಕಾರ ಎದುರಾಗುವ ಎಲ್ಲ ಪ್ರತಿರೋಧಗಳನ್ನು ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ಕೈಯಲ್ಲಿಟ್ಟು ಹೋಗಿರುವ ಸಂವಿಧಾನದ ಅಸ್ತ್ರದ ಮೂಲಕವೇ ಎದುರಿಸಿ ಮುನ್ನಡೆಯಲಿದೆ ಎಂದರು.


Spread the love

LEAVE A REPLY

Please enter your comment!
Please enter your name here