ಮಹಾವೀರರ ಸಂದೇಶಗಳ ಪರಿಪಾಲನೆ ಅವಶ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸತ್ಯ, ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸಿದ ಭಗವಾನ್ ಮಹಾವೀರರ ತತ್ವ ಸಂದೇಶಗಳು ವಿಶ್ವಮಾನ್ಯತೆಯನ್ನು ಪಡೆದಿವೆ. ವಿಶ್ವಶಾಂತಿಗಾಗಿ ಮಹಾವೀರರ ಸಂದೇಶಗಳ ಪರಿಪಾಲನೆ ಅವಶ್ಯ ಎಂದು ಜೈನಮುನಿಗಳಾದ ರಾಷ್ಟ್ರಸಂತ ಪೂಜ್ಯ ಕಮಲಮುನಿ ಹೇಳಿದರು.

Advertisement

ಅವರು ಗುರುವಾರ ನಗರದ ಪಾಂಜರಪೋಳದ ಗೋಶಾಲಾ ಆವರಣದಲ್ಲಿ ಜೈನ ಸಮಾಜದಿಂದ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು.

ನಾವಿಂದ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು. ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಪರಿಪಾಲಿಸಬೇಕಲ್ಲದೆ ಮಕ್ಕಳಿಗೆ ಸನ್ಮಾರ್ಗದಲ್ಲಿ ಸಾಗಲು ಪಾಲಕ-ಪೋಷಕರು ಮಾರ್ಗದರ್ಶನ ಮಾಡಬೇಕಿದೆ. ಕೃಷಿ ಭೂಮಿಯನ್ನು ರಸಗೊಬ್ಬರದಿಂದ ಆಗಬಹುದಾದ ಹಾನಿಯನ್ನು ತಪ್ಪಿಸುವ ಮೂಲಕ ಹೃದಯಾಘಾತ, ಕಿಡ್ನಿ ಹಾನಿ, ಅಲ್ಪ ವಯಸ್ಸಿನಲ್ಲಿ ಸಂಭವಿಸುವ ಸಾವನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆದಾಯ ತೆರಿಗೆ ಮಾಜಿ ಚೀಫ್ ಕಮಿಷನರ್ ತಿಲಕಚಂದ ಕುವರಜಿ ಲೋಡಾಯ ಅವರು ಮಹಾವೀರರ ಕೊಡುಗೆ, ಸಾಮಾಜಿಕ ಚಿಂತನೆಗಳು ಕುರಿತು ಮಾತನಾಡಿದರು.

ಜೈನ ಮುನಿಗಳಾದ ಘನಶ್ಯಾಮ್‌ಮುನಿ, ಕೌಶಲಮುನಿ, ಅಕ್ಷತ್‌ಮುನಿ, ಸಕ್ಸಮ್‌ಮುನಿಗಳು ಸಮ್ಮುಖ ವಹಿಸಿದ್ದರು. ವೇದಿಕೆಯ ಮೇಲೆ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಪಂಕಜ್ ಬಾಫಣಾ, ವರ್ಧಮಾನ ಸ್ಥಾನಿಕವಾಸಿ ಸಂಘದ ಅಧ್ಯಕ್ಷ ರೂಪಚಂದಜೀ ಪಾಲರೇಚಾ, ಜೈನ್ ತೇರಾಪಂಥ ಸಭಾದ ಅಧ್ಯಕ್ಷ ಸುರೇಶ ಕೋಠಾರಿ, ಶ್ರೀ ಕಚ್ಚಿದಾಸ್ ಓಸ್ವಾಲ ಜೈನ್ ಸಂಘದ ಅಧ್ಯಕ್ಷ ವಿಜಯರಾಜ್ ಲೂಥಿಯಾ, ದಿಗಂಬರ ಜೈನ್ ಸಂಘದ ಅಧ್ಯಕ್ಷ ಪದ್ಮರಾಜ ಕುಲಕರ್ಣಿ, ಗುಜರಾತಿ ಸಮಾಜದ ಅಧ್ಯಕ್ಷ ಛಗನ್‌ಲಾಲ್ ಪಟೇಲ್, ವಿಷ್ಣು ಸಮಾಜದ ಉಪಾಧ್ಯಕ್ಷ ರಮೇಶ ರಾಜಪುರೋಹಿತ, ಶ್ರೀ ಮಹಾವೀರ ಗೋ ಸಮಿತಿಯ ಅಧ್ಯಕ್ಷ ಅಶೋಕ ಪೋಲಾಮುಥಾ, ಕಾರ್ಯದರ್ಶಿ ಅರವಿಂದ ಬನ್ಸಾಲಿ ಉಪಸ್ಥಿತರಿದ್ದರು.

ವಿನೋದ ಮುಥಾ ಸ್ವಾಗತಿಸಿದರು, ನಲೀನ್ ಬಾಗಮಾರ ಪರಿಚಯಿಸಿದರು. ಸಚಿನ್ ಜೈನ್ ಹಾಗೂ ನರೇಶ್ ಜೈನ್ ನಿರೂಪಿಸಿದರು. ಕೊನೆಗೆ ಶ್ರವಣ ಬಾಗಮಾರ ವಂದಿಸಿದರು. ಪ್ರಸಾದ ಸೇವೆಯನ್ನು ಗೋಪಾಲ ಅಗ್ರವಾಲ ಪರಿವಾರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ವೇತಾಂಬರ ಮೂರ್ತಿ ಪೂಜಕ ಸಂಘ, ವರ್ಧಮಾನ ಸ್ಥಾನಿಕವಾಸಿ ಸಂಘ, ಜೈನ್ ತೇರಾಪಂಥ ಸಭಾ, ಶ್ರೀ ಕಚ್ಚಿದಾಸ್ ಓಸ್ವಾಲ ಜೈನ್ ಸಂಘ, ದಿಗಂಬರ ಜೈನ್ ಸಂಘ, ಗುಜರಾತಿ ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

ಗೋವುಗಳನ್ನು ಸಂರಕ್ಷಿಸಿ ಪೋಷಿಸುವ ಕಾರ್ಯ ಎಂದಿಗಿಂತ ಇಂದು ಅವಶ್ಯವಿದೆ. ಗೋ ಸಂಪತ್ತಿನಿಂದ ಆರೋಗ್ಯ ಸಂಪತ್ತು ವೃದ್ಧಿಸುವದು. ಗೋವು ರಾಷ್ಟ್ರಮಾತಾ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸುವ ಮೂಲಕ ಗೋ ಸಂರಕ್ಷಣೆಗೆ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುವದು ಅಗತ್ಯವಿದೆ ಎಂದು ಪೂಜ್ಯ ಕಮಲಮುನಿ ಹೇಳಿದರು.


Spread the love

LEAVE A REPLY

Please enter your comment!
Please enter your name here