ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಾವು ಯಾವುದೇ ಕೆಲಸ ಮಾಡುತ್ತಿದ್ದರೂ ಮೊದಲು ಅದನ್ನು ಗೌರವಿಸಬೇಕು. ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದಾಗ ಮನಸ್ಸಿಗೆ ನೆಮ್ಮದಿ ಮತ್ತು ಆತ್ಮತೃಪ್ತಿ ದೊರೆಯುತ್ತದೆ. ಜಗತ್ತಿನಲ್ಲಿ ಅರಿವು ತೋರಿದ ಗುರುವನ್ನು ನೆನೆಯುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಗಂಜಿಗಟ್ಟಿ ಚರಮೂರ್ತೇಶ್ವರಮಠದ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ರಾಮಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1987-88ನೇ ಸಾಲಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸ್ನೇಹ ಬಳಗದಿಂದ ಗುರುವಂದನಾ ಹಾಗೂ ಶಿಕ್ಷಕ ಎನ್.ಎಸ್. ಮುಶೆಪ್ಪನವರ ಅವರ ಬರೆದ `ಸಿದ್ಧಾರೂಢ ಸವಿ ನೆನಪು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಡಿವೆಕ್ಕ ಬೆಟಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಡಿಡಿಪಿಐ ಅಂದಾನಪ್ಪ ವಡಗೇರಿ ಸಿದ್ಧಾರೂಢರ ಸವಿನೆನಪು ಪುಸ್ತಕ ಬಿಡುಗಡೆಗೊಳಿಸಿದರು. ಬರಹಗಾರ ಮಂಜುನಾಥ ಬಮ್ಮನಕಟ್ಟಿ ಪುಸ್ತಕ ಪರಿಚಯ ಮಾಡಿದರು. ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಸಾವಿತ್ರಮ್ಮ ಗುಡಗೇರಿ, ಮಹದೇವಪ್ಪ ಕೊತ್ತಲ, ಪೂರ್ಣಾಜಿ ಖರಾಟೆ ಅವರಿಗೆ ಶಿಷ್ಯರು ಗುರು ವಂದನೆ ಸಲ್ಲಿಸಿದರು. ಭೂದಾನಿಗಳಾದ ವೀರನಗೌಡ ಪಾಟೀಲ, ಶಂಕರಗೌಡ ಪಾಟೀಲ, ವಿಶೇಷ ಸಾಧನೆಗೈದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಮಂಜುನಾಥ ಬಮ್ಮನಕಟ್ಟಿ, ಡಾ. ಮಹಾಂತಪ್ಪ ಕೆರೂರ, ನಾಗಪ್ಪ ಮುಶೆಪ್ಪನವರ, ಜಗದೀಶ ದೊಡ್ಡಮನಿ, ಶೇಖಪ್ಪ ಯಂಗಾಡಿ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಸಣ್ಣ ಬೆಟಗೇರಿ, ಚನ್ನಬಸಪ್ಪ ಲಿಂಗಶೆಟ್ಟಿ, ಜಯಶ್ರೀ ಹಿರೇಮಠ, ಈರಮ್ಮ ಮಡಿವಾಳರ, ಸೋಮಣ್ಣ ಬೆಟಗೇರಿ, ಕೆ.ಸಿ. ಪನ್ನೀರ್, ಮಲ್ಲಪ್ಪ ಯಂಗಾಡಿ, ರಾಮಣ್ಣ ಕಾಳಿ, ಬಿ.ಎಫ್. ದೊಡ್ಡಮನಿ, ನೀಲೇಶ ಕಾಳೆ, ಗಾಳೆಪ್ಪ ಕರೆಪ್ಪನವರ, ನೀಲಪ್ಪ ಕೆರೂರ, ಶಿವಾನಂದ ಗುಡಗೇರಿ, ಫಕ್ಕೀರಪ್ಪ ಶೆಟ್ಟಪ್ಪನವರ, ಗುಡ್ಡಪ್ಪ ಬೇವಿನಮರದ, ಅಶೋಕ ಜಿಡ್ಡಿಮನಿ, ಮಹೇಂದ್ರ ಬೆಟಗೇರಿ, ಅಶೋಕ ಕಾಳಿ, ಯಲ್ಲಪ್ಪ ಬೆಟಗೇರಿ, ಪರುಶುರಾಮ ಲಕ್ಕಣ್ಣವರ, ಮಲ್ಲಿಕಾರ್ಜುನ ಅಂಗಡಿ, ಗಂಗಾಧರ ಕಾಳಿ, ನಬೀಸಾಬ್ ಇದ್ದರು. ಎಸ್.ವೈ. ಬೆಟಗೇರಿ ಸ್ವಾಗತಿಸಿದರು. ಬಿ.ಎಂ. ಯರಗುಪ್ಪಿ, ಮಂಜುನಾಥ ಅಂಗಡಿ ನಿರೂಪಿಸಿದರು.
ಹೋತನಹಳ್ಳಿ ಸಿದ್ಧಾರೂಢಮಠದ ಶಂಕರಾನಂದ ಸ್ವಾಮೀಜಿ ಮಾತನಾಡಿ, ಸಿದ್ಧಾರೂಢರು ಸರಳವಾಗಿ ಬದುಕಿ ಬಾಳಿದ ಮಹಾತ್ಮರು. ಅವರ ಜೀವನ ಎಲ್ಲರಿಗೂ ಆದರ್ಶವಾಗಿದೆ. ಬೇರೆಯವರನ್ನು ಗೌರವಿಸುವ ಹಾಗೂ ಪ್ರೀತಿಸುವ ಗುಣ ಬೆಳೆಸಿಕೊಂಡಾಗ ಜಗತ್ತೇ ಸುಂದರವಾಗಿ ನಿರ್ಮಾಣವಾಗುತ್ತದೆ. ಇದೇ ಸಿದ್ಧಾರೂಢರು ಜಗತ್ತಿಗೆ ಸಾರಿದ ಮಂತ್ರವಾಗಿದೆ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಇಲ್ಲಿನವರು ಚೆನ್ನಾಗಿ ಅರಿತಿದ್ದಾರಲ್ಲದೆ, ಅದರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.


