ಬೆಂಗಳೂರು:- ಜಾತಿ ಕೇಳಿ ಮಣೆ ಹಾಕೋದು ಕಾಂಗ್ರೆಸ್ ನೀತಿ ಹೊರೆತು ಮೋದಿ ನೀತಿಯಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಈ ಒಂದು ಮಂತ್ರದ ಮೂಲಕ ಎಲ್ಲರಿಗೂ ಯೋಜನೆ ತಲುಪುವಂತೆ ಮಾಡಲಾಗಿದೆ. ಯಾವುದೇ ಯೋಜನೆಯಲ್ಲಿ ಜಾತಿ ಯಾವುದೆಂದು ನರೇಂದ್ರ ಮೋದಿಯವರು ಕೇಳಿಲ್ಲ. ಜನ್‍ಧನ್ ಖಾತೆ ಕೊಟ್ಟರು. ಜಾತಿ ಯಾವುದೆಂದು ಕೇಳಿ ಕೊಟ್ಟಿದ್ದಾರಾ? ಕಿಸಾನ್ ಸಮ್ಮಾನ್ ಕೊಡುವಾಗ ನಿಮ್ಮ ಜಾತಿ ಯಾವುದೆಂದು ಕೇಳಿದ್ದಾರಾ? ಎಲ್ಲರಿಗೂ ಅಕ್ಕಿ ಕೊಡುವಾಗ ಜಾತಿ ಯಾವುದೆಂದು ಕೇಳಿ ಕೊಟ್ಟರೇ? ಎಂದು ಪ್ರಶ್ನಿಸಿದರು.
ಜಾತಿ ಕೇಳುವುದು, ಮತ ಬ್ಯಾಂಕಿನಡಿ ಮಣೆ ಹಾಕುವುದು ಕಾಂಗ್ರೆಸ್ಸಿನ ನೀತಿ. ಅದು ಮೋದಿಯವರ ನೀತಿಯಲ್ಲ ಎಂದು ತಿಳಿಸಿದರು. ಪ್ರಿಯಾಂಕ್ ಖರ್ಗೆಯವರೇ ಪೇಪರ್ ಓದಿದ್ದರೆ ಪೂರ್ತಿ ಓದಿ. ಇದು ಸರ್ಕಾರದ ಕಾರ್ಯಕ್ರಮವಲ್ಲ ಎಂಬುದು ಅರ್ಥವಾಗುತ್ತದೆ. ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾವು ತಾನು ಖಾಸಗಿಯಾಗಿ ರಂಜಾನ್ ಹಿನ್ನೆಲೆಯಲ್ಲಿ ಮೋದಿಯವರ ಹೆಸರಿನಲ್ಲಿ 32 ಲಕ್ಷ ಕಿಟ್ ವಿತರಿಸುತ್ತಿದೆ. ಅದು ಸರ್ಕಾರ ಮಾಡುವುದಲ್ಲ. ಬಿಜೆಪಿ ಮಾಡುತ್ತಿರುವುದೂ ಅಲ್ಲ. ಬಿಜೆಪಿಯ ಒಂದು ಮೋರ್ಚಾವು ಮೋದಿಯವರ ಹೆಸರಿನಲ್ಲಿ ಕಿಟ್ ನೀಡುತ್ತಿದೆ. ಸರ್ಕಾರದ ಕಾರ್ಯಕ್ರಮ ಬೇರೆ, ಒಬ್ಬ ವ್ಯಕ್ತಿ, ಮೋರ್ಚಾ ಮಾಡುವ ಕಾರ್ಯಕ್ರಮವೇ ಬೇರೆ ಎಂದು ಸ್ಪಷ್ಟಪಡಿಸಿದರು.