ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಗೆ ಯತ್ನಿಸಿರುವ ಆರೋಪ ಕೇಳಿ ಬಂದಿದ್ದು, ಸ್ವಲ್ಪದರಲ್ಲೇ ಸಚಿವರು ಹನಿಟ್ರ್ಯಾಪ್ ನಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇನ್ನೂ ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದನ್ನು ಮಾಧ್ಯಮಗಳಲ್ಲಿ ನೋಡಿದ್ದಷ್ಟೇ ಗೊತ್ತು, ಇದು ಬಹಳ ಸೂಕ್ಷ್ಮ ವಿಚಾರ, ಇಂಥ ವಿಷಯಗಳಲ್ಲಿ ತಾನು ಪೆದ್ದು, ಸರಿಯಾದ ಮಾಹಿತಿ ಇಲ್ಲದೆ ಸಚಿವರ ತೇಜೋವಧೆ ಮಾಡುವುದು ಸರಿಯಲ್ಲ.
ಒಂದು ಪಕ್ಷ ಸುದ್ದಿ ನಿಜವೇ ಆಗಿದ್ದರೆ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ, ನಾಯಕನಾದವನಿಗೆ ಬಾಯಿ ಮತ್ತು ಕಚ್ಚೆ ಭದ್ರವಾಗಿರಬೇಕೆಂದು ಹಿರಿಯ ರಾಜಕಾರಣಿಗಳು ಹೇಳಿದ್ದು ನೆನಪಾಗುತ್ತಿದೆ ಎಂದು ಶಾಸಕ ಹೇಳಿದರು.