ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅಂದರ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಜೈಲು ಸೇರಿದ್ದಾರೆ. ಪ್ರಕರಣದ ಎಲ್ಲಾ 17 ಆರೋಪಿಗಳೂ ಕಂಬಿ ಹಿಂದಿದ್ದಾರೆ. 13 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ,
ಭದ್ರತಾ ದೃಷ್ಟಿಯಿಂದ 4 ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ. ಇನ್ನೂ ಈ ಪ್ರಕರಣದ ಕುರಿತು ನಟ ಡಾಲಿ ಧನಂಜಯ ಪ್ರತಿಕ್ರಿಯೆ ನೀಡಿದ್ದು, ಆರೋಪಿ ಸ್ಥಾನದಲ್ಲಿರುವವರಿಗೆ ನಾವು ಸಪೋರ್ಟ್ ಮಾಡಿಲ್ಲ. ತಪ್ಪು ಮಾಡಿದ್ರೆ ಖಂಡಿತಾ ಶಿಕ್ಷೆಯಾಗಲಿ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ, ಅಲ್ಲಿ ಒಂದು ದುರಂತ ಆಗಿದೆ. ಜೀವ ಹೋಗಿದೆ. ಆ ವ್ಯಕ್ತಿಯ ಪೋಷಕರು ಮತ್ತು ಹೆಂಡತಿನಾ ನೋಡಿದಾಗ ಬೇಜರಾಗುತ್ತದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಆ ಜೀವಕ್ಕೆ ಏನು ನ್ಯಾಯ ಸಿಗಬೇಕೋ, ಆ ನ್ಯಾಯ ಸಿಗಲೇಬೇಕು. ಹಾಗೆಯೇ ಆರೋಪಿ ಸ್ಥಾನದಲ್ಲಿರುವವರು ನಮ್ಮವರೇ ಆಗಿದ್ದಾಗ ನಿಜಕ್ಕೂ ಬೇಜಾರಾಗುತ್ತೆ ಎಂದು ಮಾತನಾಡಿದ್ದಾರೆ.
ಈ ಸುದ್ದಿ ಕೇಳಿದಾಗ ಶಾಕ್ ಆಯ್ತು. ಈ ಪ್ರಕರಣದಲ್ಲಿ ನಾವು ಪ್ರೀತಿಸಿದ ವ್ಯಕ್ತಿಯ ಹೆಸರು ಬಂದಾಗ ಬೇಜಾರಾಯಿತು. ಇಲ್ಲಿ ಯಾವುದನ್ನು ನಾವು ಸಮರ್ಥನೆ ಮಾಡಿಕೊಳ್ಳೋಕೆ ಆಗಲ್ಲ. ಎಲ್ಲದಕ್ಕೂ ಇಲ್ಲಿ ಕಾನೂನು ಇದೆ. ಅದಕ್ಕಿಂತ ದೊಡ್ಡವರು ಯಾರು ಇಲ್ಲ. ಆರೋಪಿ ಸ್ಥಾನದಲ್ಲಿರುವವರಿಗೆ ನಾವು ಸಪೋರ್ಟ್ ಮಾಡಿಲ್ಲ. ತಪ್ಪು ಮಾಡಿದ್ರೆ ಖಂಡಿತಾ ಶಿಕ್ಷೆಯಾಗಲಿ ಎಂದು ಹೇಳಿದರು.