ರಾಮನಗರ: ರಾಮನಗರದಿಂದ ಕಾಂಗ್ರೆಸ್ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇಕ್ಬಾಲ್ ಹುಸೇನ್ ಅವರು, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ಗೆ ಪತ್ರ ಬರೆದ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ಗೆ ಕಾಂಗ್ರೆಸ್ ಶಾಸಕರು ಪತ್ರ ಬರೆದ ವಿಚಾರ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ಕೆಲವು ಸಚಿವರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಮಗೆ ಕನಿಷ್ಠ ಗೌರವವನ್ನೂ ಕೊಡುತ್ತಿಲ್ಲ. ಸಂಪುಟದಲ್ಲಿ ಕೆಲವು ಬದಲಾವಣೆ ಆಗಬೇಕು. ಎಲ್ಲಾ ಸಚಿವರನ್ನೂ ಬದಲಾಯಿಸಬೇಕು ಅಂತಲ್ಲ, ಕೆಲವರಿಗೆ ಅವಕಾಶ ಕಲ್ಪಿಸಬೇಕು” ಎಂದರು.
“ಹೈಕಮಾಂಡ್‌ಗೆ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ. ಆದರೆ ನನಗೆ ಸಚಿವ ಸ್ಥಾನ ಬೇಕೆಂದು ನಾನು ಸಹಿ ಹಾಕಿಲ್ಲ. ಬದಲಾವಣೆ ಮಾಡಿ ಅಂತಲೇ ಸಹಿ ಹಾಕಿದ್ದೇನೆ. ನನಗೆ ವಿಧಾನಸಭಾ ಸದಸ್ಯ ಸ್ಥಾನವೇ ಸಾಕು, ಜನರ ಸೇವೆಯನ್ನು ಮುಂದುವರೆಸುತ್ತೇನೆ. ಬೇರೆ ಅನುಭವಸ್ಥ ಶಾಸಕರಿಗೂ ಅವಕಾಶ ಸಿಗಬೇಕು” ಎಂದರು.
ಇಕ್ಬಾಲ್ ಹುಸೇನ್ ಅವರು, ಈ ಪತ್ರವನ್ನು ಎಐಸಿಸಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಹೈಕಮಾಂಡ್ ತಮ್ಮ ಮನವಿಗೆ ಸ್ಪಂದಿಸುವ ಭರವಸೆ ಹೊಂದಿದ್ದು, ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ ಎಂದಿದ್ದಾರೆ.



