ನವದೆಹಲಿ:- ಮುಡಾದಲ್ಲಿ 4-5 ಸಾವಿರ ಕೋಟಿ ಹಗರಣ ನಡೆದಿರೋದು ನಿಜ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಆರ್ ಅಶೋಕ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
Advertisement
ಈ ಸಂಬಂಧ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಡಾ ಪ್ರಚಲಿತದಲ್ಲಿದೆ. ಮುಡಾ ಮುಚ್ಚಿ ಹಾಕಲು ಸಮಾವೇಶ ಮಾಡುತ್ತಿದ್ದಾರೆ. ನಾನು ದಾಖಲೆ ಮಾಹಿತಿ ಕೋರಿದ್ದೇನೆ ಇನ್ನು ಕೊಟ್ಟಿಲ್ಲ. ಇದು 4-5 ಸಾವಿರ ಕೋಟಿಯ ಹಗರಣ ಎಂದರು.
ಮುಡಾ ಮುಚ್ಚಿ ಹಾಕಲು ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಸ್ವಾಭಿಮಾನ ಸಮಾವೇಶ ಹೋಗಿ ಡಿಕೆ ಶಿವಕುಮಾರ್ ಸಮಾವೇಶ ಆಗಿದೆ. ಅಗ್ರಿಮೆಂಟ್ ಬಗ್ಗೆಯೂ ಚರ್ಚೆ ಆಗುತ್ತಿದೆ. ದೇವೇಗೌಡರಿಗೆ ಟಾಂಗ್ ಕೊಡಲು ಹೋಗಿ ಪರಸ್ಪರ ಟಾಂಗ್ ಕೊಡ್ತಿದ್ದಾರೆ. ನಾನು ದಾಖಲೆ ಮಾಹಿತಿ ಕೋರಿದ್ದೇನೆ ಇನ್ನು ಕೊಟ್ಟಿಲ್ಲ. ಇದು 4-5 ಸಾವಿರ ಕೋಟಿಯ ಹಗರಣ ಎಂದು ಬಾಂಬ್ ಸಿಡಿಸಿದ್ದಾರೆ.