ಬೆಂಗಳೂರು: ಡಿಕೆಶಿ ತಲೆಗೆ ನಟ್ಟು ಬೋಲ್ಟ್ ಇಲ್ಲದ ಕಾರಣ ಅಲ್ಲಾಡುತ್ತಿದೆ ಅನ್ನಿಸುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ಸಂವಿಧಾನ ರಕ್ಷಕರು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ.
Advertisement
ರಾಹುಲ್ ಗಾಂಧಿ ಸಂವಿಧಾನದ ಬುಕ್ ಹಿಡಿದುಕೊಂಡು ಗಂಟೆ ಅಲ್ಲಾಡಿಸಿದರೆ ಆಗುವುದಿಲ್ಲ. ಕಾಂಗ್ರೆಸ್‌ನವರು ಮೋದಿ ಸಂವಿಧಾನ ಬದಲಾವಣೆ ಮಾಡ್ತಾರೆ ಅಂತ ಅಪಪ್ರಚಾರ ಮಾಡಿದ್ದರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ದಾರೆ.
ಕಾಂಗ್ರೆಸ್ ಮನಸ್ಥಿತಿಯನ್ನ ಜನರ ಮುಂದೆ ಇಟ್ಟಿದ್ದಾರೆ. ಡಿಕೆಶಿ ತಲೆಗೆ ನಟ್ಟು ಬೋಲ್ಟ್ ಇಲ್ಲದ ಕಾರಣ ಅಲ್ಲಾಡುತ್ತಿದೆ ಅನ್ನಿಸುತ್ತಿದೆ. ಹೀಗೆ ಮಾತಾಡಿದರೆ ರಾಜ್ಯದ ಜನರೇ ಇವರ ನೆಟ್ಟು ಬೋಲ್ಟ್ ಟೈಟ್ ಮಾಡಲು ಸ್ಪಾನರ್ ತೆಗೆದುಕೊಳ್ಳುತ್ತಾರೆ ವ್ಯಂಗ್ಯವಾಡಿದರು.