ವಿಧಾನಸೌಧದಲ್ಲಿ RCB ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸರ್ಕಾರವಲ್ಲ: CM ಸಿದ್ದರಾಮಯ್ಯ ಹೇಳಿದ್ದೇನು?

0
Spread the love

ಬೆಂಗಳೂರು:- ವಿಧಾನಸೌಧದಲ್ಲಿ RCB ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು ರಾಜ್ಯ ಸರ್ಕಾರವಲ್ಲ ಎಂದು CM ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ ಮತ್ತು ಆರ್‌ಸಿಬಿ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಸರ್ಕಾರ ಆಯೋಜನೆ ಮಾಡಿರಲಿಲ್ಲ. ಕೆಎಸ್‌ಸಿಎ, ಆರ್‌ಸಿಬಿ ವಿಧಾನಸೌಧ ಬಳಿ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದಕ್ಕೆ ನಾನು ಒಪ್ಪಿಕೊಂಡಿದ್ದೆ. ಗೋವಿಂದರಾಜು ಕರೆ ಮಾಡಿ ರಾಜ್ಯಪಾಲರಿಗೆ ಕೊಟ್ಟರು. ನಾನು ಹೋಗುತ್ತಿದ್ದೇನೆ. ನೀವು ಬನ್ನಿ ಎಂದು ಹೇಳಿದೆ. ಅಧಿಕೃತ ಆಹ್ವಾನ ಯಾರು ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ತಿಳಿಸಿದರು.

ಕಾಲ್ತುಳಿತ ಪ್ರಕರಣದಲ್ಲಿ ರಾಜೀನಾಮೆ ಕೇಳಿದ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಕುಂಭಮೇಳ, ಗೋಧ್ರಾ ಹತ್ಯಾಕಾಂಡ, ಕೋವಿಡ್ ಸಮಯದಲ್ಲಿ ಆಮ್ಲಜನಕ ಸಿಗದೇ ಎಷ್ಟು ಜನ ಸತ್ತಿದ್ದಾರೆ? ಆಗ ಬಿಜೆಪಿಗರು ರಾಜೀನಾಮೆ ನೀಡಿದ್ದಾರಾ ಎಂದು ಪ್ರಶ್ನಿಸಿದರು.


Spread the love

LEAVE A REPLY

Please enter your comment!
Please enter your name here