ನವದೆಹಲಿ: ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದ್ದು ಯಡಿಯೂರಪ್ಪ ಅಲ್ಲ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆ ಅಂತ ಕುಮಾರ ಬಂಗಾರಪ್ಪ,
ಜಿಎಂ ಸಿದ್ದೇಶ್ವರ ಮೊದಲಾದವರು ಹೇಳಿಕೊಂಡು ತಿರುಗಾಡುತ್ತಿರುವುದು ಶುದ್ಧ ಸುಳ್ಳು ಮತ್ತು ಊಹಾಪೋಹ ಮಾತ್ರ ಆಗಿದೆ ಎಂದು ಹೇಳಿದರು. ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದ್ದು ಯಡಿಯೂರಪ್ಪ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಜೀ, ಜೆಪಿ ನಡ್ಡಾ ಜೀ, ಸಂತೋಷ ಜೀ ಮೊದಲಾದವರು ಎಂದು ತಿಳಿಸಿದ್ದಾರೆ.
ಇನ್ನೂ ಬೆಳಗಾವಿ ಹೊರವಲಯದ ಹೋಟೆಲ್ನಲ್ಲಿ ಬಿವೈ ವಿಜಯೇಂದ್ರ ಪಕ್ಷದ ಶಾಸಕರು, ಎಂಎಲ್ಸಿಗಳಿಗೆ ಡಿನ್ನರ್ ವ್ಯವಸ್ಥೆ ಮಾಡಿದ್ದರು. ಕಲಾಪದ ನಡುವೆಯೂ ಒಬ್ಬೊಬ್ಬರಾಗಿ ಭೋಜನ ಕೂಟಕ್ಕೆ ಆಗಮಿಸಿದ್ದು ಉಂಟು. ಆದ್ರೆ ಯತ್ನಾಳ್,
ರಮೇಶ್ ಜಾರಕಿಹೊಳಿ ಸೇರಿ ಹಲವು ನಾಯಕರು ಡಿನ್ನರ್ಗೆ ಬರಲೇ ಇಲ್ಲ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದರೂ ಸಹ ಪಕ್ಷದೊಳಗೆ ಇನ್ನೂ ಯಾವುದು ಸರಿ ಹೋಗಿಲ್ಲ ಎನ್ನುವುದಕ್ಕೆ ಇದು ಕೂಡ ಸಾಕ್ಷಿ ಆಗಿದೆ.