ಮಂಡ್ಯ: ದರ್ಶನ್ ಪ್ಯಾನ್ಸ್’ನಿಂದ ರಮ್ಯಗೆ ಕೆಟ್ಟ ಸಂದೇಶ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ತಮ್ಮ ಫ್ಯಾನ್ಸ್‌ಗಳಿಗೆ ಸಲಹೆ ಕೊಟ್ಟರೆ ಒಳ್ಳೆಯದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
Advertisement
ಮಂಡ್ಯದ ದುದ್ದಗ್ರಾಮದಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ತಪ್ಪಿತಸ್ಥರು ಎಂದು ಗೊತ್ತಾದ್ರೆ ಶಿಕ್ಷೆ ಆಗುತ್ತೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ನ್ಯಾಯಾಲಯದ ತೀರ್ಪು ಏನೇ ಬಂದರೂ, ಅದಕ್ಕೆ ಎಲ್ಲರೂ ಮನ್ನಣೆ ನೀಡಬೇಕು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಬೈದುಕೊಂಡರೆ ಏನೂ ಆಗುವುದಿಲ್ಲ. ಇಂತಹ ಕಾಮೆಂಟ್‌ಗಳಿಂದ ಸಮಾಜದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆಯಾಗುವುದಿಲ್ಲ. ಇದು ಕೇವಲ ಸಮಯ ವ್ಯರ್ಥ ಮಾಡುವುದಷ್ಟೇ ಎಂದು ಹೇಳಿದ್ದಾರೆ.