ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಿಗೆ ಹರಿಬಿಟ್ಟರೆ ಸರಿಯಿರಲ್ಲ ಎಂದು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಕಿಡಿಕಾರಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,
Advertisement
ಸ್ವಂತ ಕ್ಷೇತ್ರದಲ್ಲಿ ಯತ್ನಾಳ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಕೊಡೋದಕ್ಕೆ ಆಗಲಿಲ್ಲ. ಇಂತಹವರು ಹೊಸ ಪಕ್ಷ ಕಟ್ಟಿ ಸಾಧನೆ ಮಾಡಲು ಸಾಧ್ಯನಾ? ಹೊಸ ವರ್ಷ ಪ್ರಾರಂಭ ಆಗಿದೆ. ಹೊಸ ಯೋಜನೆ ಬಗ್ಗೆ ಮಾತಾಡೋಣ ಎಂದರು.
ಇನ್ನೂ ಮಹಾಭಾರತದಲ್ಲಿ ಶಿಶುಪಾಲ ಬರುತ್ತಾನೆ. ಶಿಶುಪಾಲ, ಶ್ರೀಕೃಷ್ಣನ ಬಗ್ಗೆ ಚುಚ್ಚಿ ಚುಚ್ಚಿ ಮಾತಾಡಿದ. ಅವನ ಅಂತ್ಯ ಹೇಗಾಯ್ತು. ಕಲಿಯುಗದ ಶಿಶುಪಾಲ ಯತ್ನಾಳ್. ಶಿಶುಪಾಲನಿಗೆ ಆದ ಶಿಕ್ಷೆಯನ್ನೇ ಜನರು ಯತ್ನಾಳ್‌ಗೆ ಕೊಡುತ್ತಾರೆ ಎಂದು ಕಿಡಿಕಾರಿದರು.